See also 2dazzle
1dazzle ಡ್ಯಾಸ್‍ಲ್‍
ಸಕರ್ಮಕ ಕ್ರಿಯಾಪದ
  1. (ಅತಿ ಬೆಳಕಿನಿಂದ) ಕಣ್ಣು – ಚುಚ್ಚು, ಕುಕ್ಕು, ಕೋರೈಸು; ಮಬ್ಬು ಹಿಡಿಸು.
  2. (ವ್ಯಕ್ತಿಯನ್ನು ಜಟಿಲ ಚಲನೆ, ಎಣಿಸಲಾಗದ ಸಂಖ್ಯೆ, ಮೊದಲಾದವುಗಳಿಂದ) ದಿಗ್ಭ್ರಮೆಗೊಳಿಸು; ಕಕ್ಕಾಬಿಕ್ಕಿಗೊಳಿಸು.
  3. (ಮನಸ್ಸು ವ್ಯಕ್ತಿಗಳನ್ನು ಕೌಶಲಪ್ರದರ್ಶನ, ದೃಶ್ಯ, ಮೊದಲಾದವುಗಳಿಂದ) ಬೆರಗುಗೊಳಿಸು; ವಿಸ್ಮಯಗೊಳಿಸು; ಆಶ್ಚರ್ಯಚಕಿತರಾಗುವಂತೆ ಮಾಡು.
  4. (ಪ್ರತಿಭೆ ಮೊದಲಾದವುಗಳಿಂದ) ದಿಗ್ಭ್ರಮೆಗೊಳಿಸು; ದಿಕ್ಕುತೋಚದಂತೆ ಮಾಡು.
  5. (ಪ್ರತಿಭೆ ಮೊದಲಾದವುಗಳ ಮೂಲಕ) ಪ್ರಭಾವ ಬೀರು; ಪರಿಣಾಮ ಉಂಟುಮಾಡು.
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಕಣ್ಣುಗಳ ವಿಷಯದಲ್ಲಿ) ಚುಚ್ಚು; ಕೊರೈಸುವಂತಾಗು.
  2. ಪ್ರಕಾಶಮಾನವಾಗಿ ಹೊಳೆ; ಉಜ್ಜ್ವಲವಾಗಿರು; ಪ್ರಜ್ವಲಿಸು.
See also 1dazzle
2dazzle ಡ್ಯಾಸ್‍ಲ್‍
ನಾಮವಾಚಕ

ಕಡು ಹೊಳಪು; ಅತಿ ಪ್ರಕಾಶ; ಉಜ್ಜ್ವಲ ಪ್ರಭೆ; ಕಣ್ಣು ಕೋರೈಸುವಂಥ ಬೆಳಕು.

ಪದಗುಚ್ಛ
  1. dazzle lamps (ಮೋಟಾರು ವಾಹನಗಳ) ಕಣ್ಣು ಕುಕ್ಕುವ ದೀಪಗಳು.
  2. dazzle lights = ಪದಗುಚ್ಛ \((1)\).
  3. dazzle paint ಕೋರೈಸುವ ಬಣ್ಣ; ಹಡಗಿನ ಮಾದರಿಯನ್ನು ಯಾ ಮಾರ್ಗವನ್ನು ಶತ್ರುಗಳು ತಿಳಿಯಲಾಗದಂತೆ ಹಡಗಿಗೆ ಬಳಿದಿರುವ ಬಣ್ಣದ ರೀತಿ.