danger ಡೇಂಜರ್‍
ನಾಮವಾಚಕ
  1. ಅಪಾಯ; ಅನರ್ಥ; ಗಂಡಾಂತರ; ಆಪತ್ತು; ವಿಪತ್ತು; ಪ್ರಮಾದ; ಸೆರಗು (ಗ್ರಾಂ); ಭಯ.
  2. (ರೈಲ್ವೆ) ಅಪಾಯ – ಸೂಚನೆ, ಸಂಜ್ಞೆ, ಸಂಕೇತ; ಎಚ್ಚರಿಕೆಯನ್ನೋ ನಿಲ್ಲಬೇಕೆಂಬುದನ್ನೋ ಸೂಚಿಸುವ ರೈಲ್ವೆ ಸಂಕೇತ: signal is at danger ಸಂಜ್ಞೆಯು ಎಚ್ಚರಿಕೆಯನ್ನು ತೋರಿಸುತ್ತಿದೆ.
  3. ಅಪಾಯಕಾರಿ; ಹಾನಿಕಾರಿ; ಕೆಡಕನ್ನುಂಟುಮಾಡುವ – ವಸ್ತು, ವಿಷಯ: a danger to peace ಶಾಂತಿಗೆ ಅಪಾಯಕಾರಿ.
ಪದಗುಚ್ಛ
  1. in danger of (ಯಾವುದೋ ಒಂದರ) ಅಪಾಯವಿರುವ; ಅಪಾಯದ ಸಂಭವವಿರುವ; ಅಪಾಯ – ಘಟಿಸಬಹುದಾದ, ಸಂಭವಿಸಬಹುದಾದ.
  2. out of danger ಅಪಾಯದಿಂದ ಪಾರಾದ; ಸದ್ಯದ ರೋಗ ಮೊದಲಾದವುಗಳಿಂದ ಸಾಯುವ ಸಂಭವವಿಲ್ಲದ.