culmination ಕಲ್ಮಿನೇಷನ್‍
ನಾಮವಾಚಕ
  1. ಅತ್ಯುನ್ನತ ಸ್ಥಿತಿ; ಪರಾಕಾಷ್ಠೆ (ರೂಪಕವಾಗಿ ಸಹ).
  2. ಅಗ್ರ; ಶಿಖರ; ಕೊನೆ; ತುತ್ತತುದಿ (ರೂಪಕವಾಗಿ ಸಹ).
  3. (ಖಗೋಳ ವಿಜ್ಞಾನ) ಉಚ್ಛ್ರಾಯ; ಖಗೋಳಕಾಯವು ತನ್ನ ದೈನಂದಿನ ಚಲನೆಯಲ್ಲಿ ಯಾವುದೇ ಸ್ಥಳದ ಮಧ್ಯಾಹ್ನರೇಖೆಯನ್ನು ದಾಟುವ ಬಿಂದು.
  4. ಸಮಾಪ್ತಿ; ಅಂತ್ಯ.