creation ಕ್ರಿಏಷನ್‍
ನಾಮವಾಚಕ
  1. (ಮುಖ್ಯವಾಗಿ ಪ್ರಪಂಚದ) ಸೃಷ್ಟಿ; ಉತ್ಪತ್ತಿ; ನಿರ್ಮಾಣ.
  2. ಹುಟ್ಟು; ಸೃಷ್ಟಿಯಾಗುವಿಕೆ; ಉಂಟಾಗುವಿಕೆ.
  3. ಸೃಷ್ಟಿ; ಸೃಷ್ಟವಾದದ್ದು.
  4. ಸೃಷ್ಟಪ್ರಪಂಚ; ಜಗತ್ತು; ವಿಶ್ವ; ಬ್ರಹ್ಮಾಂಡ; ಜೀವ, ಜಡ ವಸ್ತುಗಳ ಸಮಷ್ಟಿ.
  5. (ವಿನ್ಯಾಸಕಾರನ ಯಾ ನಟನ) ಕಲ್ಪನಾಸೃಷ್ಟಿ; ವಿಭಾವನಾ ಸೃಷ್ಟಿ.
  6. ಬಿರುದು, ಪದವಿ ಮೊದಲಾದವನ್ನು ಕೊಡುವುದು.
  7. (ಉಡಿಗೆ ತೊಡಿಗೆ ಮೊದಲಾದವುಗಳ ವಿಷಯದಲ್ಲಿ) ಹೊಸ ನಮೂನೆಯದ್ದು; ಹೊಸದಾಗಿ ರೂಪಿತವಾದದ್ದು.