See also 2cow
1cow ಕೌ
ನಾಮವಾಚಕ
(ಬಹುವಚನ cows ಪ್ರಾಚೀನ ಪ್ರಯೋಗ kine).
  1. ಹಸು; ಆಕಳು; ಆವು; ಗೋವು.
  2. ಎಮ್ಮೆ.
  3. ದನಕರು; ಜಾನುವಾರು; ಗಂಟಿ.
  4. ಹೆಣ್ಣುಪ್ರಾಣಿ; ಆನೆ, ಘೇಂಡಾಮೃಗ ಮೊದಲಾದವುಗಳ ಹೆಣ್ಣು.
  5. (ಅಶಿಷ್ಟ ಯಾ ಹೀನಾರ್ಥಕ ಪ್ರಯೋಗ) ಕೊಳಕು ದುಡುಮಿ; ದಪ್ಪನೆಯ, ಒರಟೊರಟಾದ, ಅಸಹ್ಯ ಹೆಂಗಸು.
  6. (ಹೀನಾರ್ಥಕ ಪ್ರಯೋಗ) ಬಹು ಗಬ್ಬವತಿ; ಬಹುಪುತ್ರವತಿ; ಬಹು ಮಕ್ಕಳ ತಾಯಿ; ಪದೇಪದೇ ಬಸಿರಾಗುವವಳು.
  7. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಾಲು.
  8. (ಆಸ್ಟ್ರೇಲಿಯ ನ್ಯೂಸಿಲಂಡ್‍) ಅನಿಷ್ಟ; ಅಹಿತಕರವಾದ ಯಾ ಅಸಹ್ಯವಾದ–ವಸ್ತು, ವ್ಯಕ್ತಿ, ಸಂದರ್ಭ ಮೊದಲಾದವು.
ನುಡಿಗಟ್ಟು

till the cows come home (ಅಶಿಷ್ಟ) ಬಹಳ ಹೊತ್ತು; ದನ ಹಿಂದಿರುಗುವವರೆಗೆ; ಕೊನೆಯೇ ಇಲ್ಲದೆ; ಬಹಳ ಕಾಲದವರೆಗೆ: if I don’t tell her to stop, she will go on talking till the cows come home ನಿಲ್ಲಿಸೆಂದು ನಾನು ಹೇಳದಿದ್ದರೆ, ಅವಳು ಮಾತು ಮುಗಿಸುವುದೇ ಇಲ್ಲ.

See also 1cow
2cow ಕೌ
ಸಕರ್ಮಕ ಕ್ರಿಯಾಪದ

ಭಯ ಹುಟ್ಟಿಸು; ಹೆದರಿಸು; ಬೆದರಿಸು; ಬೆದರಿಕೆ, ಶಿಕ್ಷೆ ಮೊದಲಾದವುಗಳ ಭಯದಿಂದ ಶರಣಾಗುವಂತೆ ಮಾಡು.