See also 2corona
1corona ಕರೋನ
ನಾಮವಾಚಕ
(ಬಹುವಚನ coronae ಯಾ coronas).
  1. ಮಂಡಲ; ಕೊಡೆ; ಪರಿವೇಷ; ವಲಯ; ಗಾಳಿಯಲ್ಲಿ ಮಂಜಿರುವಾಗ ಸೂರ್ಯ ಯಾ ಚಂದ್ರನ ಸುತ್ತಲೂ ಕಾಣುವ, ಸಾಮಾನ್ಯವಾಗಿ ಬಣ್ಣದ, ವೃತ್ತಗಳು.
  2. (ಖಗೋಳ ವಿಜ್ಞಾನ) ಕರೋನ; ಪ್ರಭಾವಲಯ; ಪರಿಮಂಡಲ; ಸೂರ್ಯನ ಹೊರಮೈಯಿಂದ ಲಕ್ಷಾಂತರ ಮೈಲಿಗಳವರೆಗೂ ಹರಡಿಕೊಂಡಿರುವ, ಪೂರ್ಣ ಸೂರ್ಯಗ್ರಹಣ ಸಮಯದಲ್ಲಿ ಚಂದ್ರನ ಸುತ್ತಲೂ ಪ್ರಕಾಶಮಾನವಾಗಿ ಕಾಣುವ ಸೂರ್ಯನ ವಿರಳೀಕೃತ ಅನಿಲದ ಆವರಣ.
  3. (ಸಸ್ಯವಿಜ್ಞಾನ) ಮುಕುಟ; ಕರೋನ; ಕೆಲವು ಹೂಗಳಲ್ಲಿನ ಎಸಳುಸುತ್ತಿನ ಒಳಗಿರುವ ಕಿರು ಎಸಳುಸುತ್ತು.
  4. (ಅಂಗರಚನಾಶಾಸ್ತ್ರ) ಮುಕುಟ; ಯಾವುದೇ ದೇಹಭಾಗದ ಮೇಲ್ಗಡೆಯ ಕಿರೀಟದಂಥ ಭಾಗ.
  5. (ಚಾವಣಿಯಿಂದ ತೂಗುಹಾಕಿರುವ) ವರ್ತುಲಾಕಾರದ ಗೊಂಚಲು ದೀಪ.
  6. ವಿದ್ಯುತ್ಕರೋನ; ಅಧಿಕ ಒತ್ತಡದಲ್ಲಿ ವಿದ್ಯುತ್ತನ್ನು ಒಯ್ಯುತ್ತಿರುವ ತಂತಿಗಳ ಸುತ್ತಲೂ ಕಾಣುವ ಮಂದ ಬೆಳಕು.
  7. (ವಾಸ್ತುಶಿಲ್ಪ) ಗೋಡೆಯ ಕಪೋತದ ಚಾಚುಭಾಗ.
  8. (ಸಸ್ಯವಿಜ್ಞಾನ) ಬೀಜ ಮುಕುಟ; ಬೀಜದ ತುದಿಯ ಚುಂಗು.
See also 1corona
2corona ಕರೋನ
ನಾಮವಾಚಕ

ಒಂದು ಬಗೆಯ, ಉದ್ದ–ಸಿಗಾರು, ಚಟ್ಟ.