contend ಕಂಟೆಂಡ್‍
ಸಕರ್ಮಕ ಕ್ರಿಯಾಪದ

(ಅಭಿಪ್ರಾಯ) ಒತ್ತಿಹೇಳು; ಎತ್ತಿ ಹಿಡಿ; ಪಟ್ಟು ಹಿಡಿ; ಸಾಧಿಸು: he contended that the taxes were too high ತೆರಿಗೆಗಳು ಬಹು ಹೆಚ್ಚೆಂದು ಆತ ಪಟ್ಟು ಹಿಡಿದನು.

ಅಕರ್ಮಕ ಕ್ರಿಯಾಪದ
  1. (ಒಂದು ವಸ್ತುವಿಗಾಗಿ ಒಬ್ಬನೊಡನೆ) ಹೋರಾಡು; ಹೊಡೆದಾಡು; ಕಾದಾಡು.
  2. (ಭಾವಗಳು, ಪ್ರಕೃತಿಶಕ್ತಿಗಳ ವಿರುದ್ಧ) ಸೆಣಸು; ಹೆಣಗು.
  3. ಸ್ಪರ್ಧಿಸು; ಪೈಪೋಟಿ ನಡೆಸು.
  4. ವಾದಿಸು; ವಾದ ಮಾಡು.