connection ಕನೆಕ್‍ಷನ್‍
ನಾಮವಾಚಕ
  1. ಕೂಡಿಸಿಕೆ; ಸೇರಿಸಿಕೆ.
  2. ಸೇರಿಕೆ; ಸೇರುವೆ; ಸಂಯೋಜನೆ; ಸಂಬಂಧ; ಸಂಯೋಜಿತ ಸ್ಥಿತಿ; ಕೂಡಿರುವ ಸ್ಥಿತಿ: cut the connection ಸಂಬಂಧ ಕಡಿ; ವಿಚ್ಛೇದಿಸು; ಬೇರೆ ಮಾಡು.
  3. (ಆಲೋಚನೆಯ, ವಿಚಾರ ಸರಣಿಯ) ಸಂಬಂಧ; ಪ್ರಸಂಗ; ಸಂದರ್ಭ: in this or that connection ಈ ಸಂಬಂಧದಲ್ಲಿ ಯಾ ಆ ಸಂದರ್ಭದಲ್ಲಿ.
  4. ಸಂಬಂಧಕ; ಸಂಬಂಧ ಕಲ್ಪಿಸುವ–ಅಂಗ, ಭಾಗ.
  5. ಸಂಪರ್ಕದ, ಸಂಪರ್ಕಿಸುವ, ಸಂಬಂಧ ಕಲ್ಪಿಸುವ–ರೈಲು, ದೋಣಿ, ಮೊದಲಾದವು: miss the (or one’s) connection ಸಂಪರ್ಕದ ರೈಲು ಮೊದಲಾದವು ತಪ್ಪು.
  6. ವೈಯಕ್ತಿಕ ಯಾ ಸ್ವಂತ ವ್ಯವಹಾರಗಳು.
  7. (ಪ್ರಾಚೀನ ಪ್ರಯೋಗ) ಸಂಭೋಗ; ಲೈಂಗಿಕ ಸಂಬಂಧ.
  8. ಸಂಬಂಧ; ನಂಟು; ಬಾಂಧವ್ಯ; ಬಂಧುತ್ವ.
  9. ನೆಂಟ; ಬಂಧು; ಸಂಬಂಧಿ; ನೆಂಟಸ್ತನ, ಮದುವೆ ಮೊದಲಾದವುಗಳ ಮೂಲಕ ಸಂಬಂಧಿಸಿದವ.
  10. (ಅಶಿಷ್ಟ) ಮಾದಕ ವಸ್ತುಗಳನ್ನು ಒದಗಿಸುವವನು.
  11. ಧಾರ್ಮಿಕ–ಪಂಗಡ, ಶಾಖೆ, ಮುಖ್ಯವಾಗಿ ಮೆಥಡಿಸ್ಟ್‍ ಪಂಗಡ.
  12. ಗಿರಾಕಿಗಳು: this tailor has good connections ಈ ದರ್ಜಿಗೆ ಒಳ್ಳೆ ಗಿರಾಕಿಗಳಿದ್ದಾರೆ.
ಪದಗುಚ್ಛ

in connection with

  1. ಕುರಿತು; ಸಂಬಂಧವಾಗಿ; ವಿಷಯವಾಗಿ; ಬಗ್ಗೆ.
  2. (ರೈಲು ಮೊದಲಾದವುಗಳ ವಿಷಯದಲ್ಲಿ) ಸಂಪರ್ಕಿಸುವ; ಪ್ರಯಾಣಿಕರನ್ನು ಬದಲಾಯಿಸಲು ಇನ್ನೊಂದು ವಾಹನವನ್ನು ಸಂಧಿಸುವ, ಹಿಡಿಯುವ.