confirm ಕನ್‍ಹರ್ಮ್‍
ಸಕರ್ಮಕ ಕ್ರಿಯಾಪದ
  1. (ಅಧಿಕಾರ, ಅನುಭವದಾರ, ಸ್ವಾಧೀನ, ಇವುಗಳ ವಿಷಯದಲ್ಲಿ) ಬಲಪಡಿಸು; ಸ್ಥಿರಪಡಿಸು; ದೃಢಪಡಿಸು.
  2. (ಸಂಧಿ, ಹಕ್ಕುದಾರಿಕೆ, ಸ್ವತ್ತು ಮೊದಲಾದವನ್ನು) ಊರ್ಜಿತಪಡಿಸು; ಕಾಯಂ ಮಾಡು.
  3. (ಹೇಳಿಕೆ, ರುಜುವಾತನ್ನು) ಪುಷ್ಟೀಕರಿಸು; ಸಾಧಿಸು; ಸಮರ್ಥಿಸು.
  4. (ಒಬ್ಬ ವ್ಯಕ್ತಿಯನ್ನು ಆತನ ರೂಢಿ, ಅಭಿಪ್ರಾಯ ಮೊದಲಾದವುಗಳಲ್ಲಿ) ನೆಲೆಗೊಳಿಸು; ಬೇರೂರಿಸು; ಸ್ಥಾಪಿಸು; ಪ್ರೋತ್ಸಾಹಿಸು.
  5. (ಕ್ರೈಸ್ತರಲ್ಲಿ ಮತ್ತು ಯೆಹೂದ್ಯರಲ್ಲಿ) ಸ್ಥಿರೀಕರಣ ಸಂಸ್ಕಾರ ನೀಡು.