compatible ಕಂಪ್ಯಾಟ(ಟಿ)ಬ್‍ಲ್‍
ಗುಣವಾಚಕ
  1. ಹೊಂದಿಕೊಂಡಿರುವ; ಸಮರಸವಾಗಿರುವ; ಸಮಂಜಸ; ಸಂಗತ; ಅವಿರುದ್ಧ; ಹೊಂದಿಕೆಯಾದ; ಒಪ್ಪುವ: his claims are not compatible with the facts ಅವನು ಕೇಳುವುದು ವಸ್ತುಸ್ಥಿತಿಗೆ ಸಂಗತವಾಗಿಲ್ಲ.
  2. ವಿರೋಧವಿಲ್ಲದೆ ಜೊತೆಗಿರಬಲ್ಲ; ಸಹವರ್ತನ ಸಾಧ್ಯ: heat is compatible with moisture ತಾಪ ತೇವದೊಂದಿಗೆ ಇರಬಲ್ಲದು.
  3. (ಸಾಧನ, ಸಲಕರಣೆಗಳ ವಿಷಯದಲ್ಲಿ) ಇನ್ನೊಂದರ ಜೊತೆಯಲ್ಲಿ ಬಳಸಬಹುದಾದ; ಸಹೋಪಯೋಗಿಯಾದ.