committee ಕಮಿಟಿ
ನಾಮವಾಚಕ
  1. (ಒಂದು ದೊಡ್ಡ ಸಂಘವು ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ, ಸಾಮಾನ್ಯವಾಗಿ ಆ ಸಂಘದ ಸದಸ್ಯರೇ ಇರುವ, ಸಣ್ಣದಾದ) ಸಮಿತಿ; ಕಮಿಟಿ; ಮಂಡಲಿ.
  2. ಮುಖ್ಯವಾಗಿ ಪರ್ಯಾಲೋಚನೆಗಾಗಿ ಇಟ್ಟಿರುವ ಕಾನೂನಿನ ವಿವರಗಳನ್ನು ಪರಿಶೀಲಿಸಲು, ಶಾಸನಸಭೆ ಮೊದಲಾದವುಗಳಿಂದ ನೇಮಕವಾದ, ಅದೇ ರೀತಿಯ ಮಂಡಲಿ, ಸಮಿತಿ.
  3. (Committee) (ಬ್ರಿಟಿಷ್‍ ಪ್ರಯೋಗ) ಪೂರ್ಣಸಭಾಮಂಡಲಿ; ಸರ್ವಸದಸ್ಯ ಸಭೆ; ಸಮಿತಿಯಂತೆ ವರ್ತಿಸುವ ಇಡೀ ಹೌಸ್‍ ಆಹ್‍ ಕಾಮನ್ಸ್‍ ಸಭೆ; ಸಭೆಯ ಎಲ್ಲಾ ಸದಸ್ಯರನ್ನೂ ಒಳಗೊಂಡ ಮಂಡಲಿ.
  4. (ಉಚ್ಚಾರಣೆ ಕಾಮಿಟೀ) (ನ್ಯಾಯಶಾಸ್ತ್ರ) ಜವಾಬ್ದಾರ; ಹೊಣೆಗಾರ; ಪೋಷಕ; ಒಬ್ಬ ವ್ಯಕ್ತಿಯನ್ನು ಯಾ ಆತನ ಆಸ್ತಿಯನ್ನು ನೋಡಿಕೊಳ್ಳಲು ನೇಮಕಗೊಂಡ ವ್ಯಕ್ತಿ.
ಪದಗುಚ್ಛ
  1. Committee of Supply (ಬ್ರಿಟಿಷ್‍ ಪ್ರಯೋಗ) ಸರಬರಾಯಿ ಸಮಿತಿ; ಸಾರ್ವಜನಿಕ ಕಾಮಗಾರಿಗಳ ವಾರ್ಷಿಕ ವೆಚ್ಚದ ಅಂದಾಜಿನ ವಿವರಗಳನ್ನು ಪರಿಶೀಲಿಸುವ ಪಾರ್ಲಿಮಂಟಿನ ಸಮಿತಿ.
  2. Committee of the whole house = committee(3)
  3. Committee of Ways and Means ಆರ್ಥಿಕ ಸಾಧನೋಪಾಯ ಸಮಿತಿ.
  4. House resolves itself into a Committee, goes into Committee, is in Committee ಒಟ್ಟು ಸಭೆಯೇ–ಸಮಿತಿಯಾಗಿ ವರ್ತಿಸುತ್ತದೆ, ಸಮಿತಿಯಾಗುತ್ತದೆ, ಸಮಿತಿಯಾಗಿದೆ (ಅಂದರೆ ಕೇವಲ ಸಭಾನಿಯಮಗಳಿಗೆ ಬದ್ಧವಾಗಿರದೆ ಸ್ವತಂತ್ರವಾಗಿ ವರ್ತಿಸುತ್ತದೆ)
  5. in committee ಮಸೂದೆಯನ್ನು ಸಮಿತಿ ಪರಿಶೀಲಿಸುತ್ತಿದೆ.
  6. Joint Committee ಸಂಯುಕ್ತ ಸಮಿತಿ; ಜಂಟಿ ಸಮಿತಿ; ಬೇರೆಬೇರೆ ಸಂಘದವರು ಹೆಸರಿಸಿದ ಸದಸ್ಯರುಗಳ ಮಂಡಳಿ.
  7. standing committee ಸ್ಥಾಯೀ ಸಮಿತಿ; ಒಂದು ಸಂಘದಿಂದ ನಿಯಾಮಕವಾಗಿ ಆ ಸಂಘವಿರುವವರೆಗೂ ಕಾರ್ಯಾಲೋಚನೆಗೆ ಅಧಿಕಾರವಿರುವ ಸಮಿತಿ.
  8. sub-committee ಉಪಸಮಿತಿ.