See also 2commensal
1commensal ಕಮೆನ್ಸಲ್‍
ಗುಣವಾಚಕ
  1. ಸಹಭೋಜನದ; ಭೋಜನಕ್ಕೆ ಒಟ್ಟಿಗೆ ಕೂರುವ; ಒಟ್ಟಿಗೆ ಉಣ್ಣುವ; ಸಹಪಂಕ್ತಿಯ; ಒಂದೇ ಸಾಲಿನಲ್ಲಿ ಕುಳಿತು ಊಟ ಮಾಡುವ.
  2. (ಜೀವವಿಜ್ಞಾನ) ಸಹಜೀವಿ; (ಪ್ರಾಣಿ, ಸಸ್ಯಗಳ ವಿಷಯದಲ್ಲಿ) ತನ್ನ ಆಶ್ರಯಿಜೀವಿಗೆ ತೊಂದರೆಯಾಗದಂತೆ ಅದರೊಂದಿಗೆ ಯಾ ಅದರಲ್ಲಿದ್ದುಕೊಂಡು ಬದುಕು ಸಾಗಿಸುವ, ಆಹಾರ ರಕ್ಷಣೆಗಳನ್ನು ಪಡೆಯುವ.
See also 1commensal
2commensal ಕಮೆನ್ಸ್‍ಲ್‍
ನಾಮವಾಚಕ
  1. ಸಹಭೋಜಿ; ಸಹಪಂಕ್ತಿಯವನು; ಒಂದೇ ಸಾಲಿನಲ್ಲಿ ಕುಳಿತು ಊಟ ಮಾಡುವವನು.
  2. (ಜೀವವಿಜ್ಞಾನ) ಕೂಡುದಿನಿ; ಸಹಜೀವಿ; ಸಹಾದ; ತನ್ನ ಆಶ್ರಯದಾತವಾದ ಇನ್ನೊಂದು ಜೀವಿಗೆ ಹಾನಿ ಯಾ ತೊಂದರೆ ಆಗದಂತೆ ಅದರೊಂದಿಗೆ ಯಾ ಅದರಲ್ಲಿ ಇದ್ದುಕೊಂಡು ಬದುಕು ಸಾಗಿಸುವ, ಆಹಾರ, ರಕ್ಷಣೆ, ಪೋಷಣೆ ಪಡೆಯುವ ಜೀವಿ.