coinage ಕಾಇನಿಜ್‍
ನಾಮವಾಚಕ
  1. ನಾಣ್ಯ ಟಂಕಿಸುವುದು.
  2. (ಬಗೆಬಗೆಯ) ನಾಣ್ಯಗಳು.
  3. (ಚಲಾವಣೆಯಲ್ಲಿರುವ) ನಾಣ್ಯ–ಪದ್ಧತಿ, ವ್ಯವಸ್ಥೆ: decimal coin ದಶಮಾಂಶ ನಾಣ್ಯ ಪದ್ಧತಿ.
  4. (ಯಾವುದೇ ವಸ್ತುವಿನ ಯಾ ವಿಷಯದ) ಸ್ಪಷ್ಟನೆ; ರಚನೆ; ಕಲ್ಪನೆ; ನಿರ್ಮಾಣ: the coin of one’s brain ತನ್ನ ಬುದ್ಧಿಯಿಂದಲೇ (ಹಲವೊಮ್ಮೆ ನಿರಾಧಾರವಾಗಿ) ಸೃಷ್ಟಿಸಿಕೊಂಡ ಕಲ್ಪನೆ; ಸ್ವಕಪೋಲಕಲ್ಪನೆ.
  5. ಕಲ್ಪಿತ ಪದ; ಸೃಷ್ಟಪದ; ಹೊಸದಾಗಿ ಸೃಷ್ಟಿಸಿದ ಪದ.