cloudy ಕ್ಲೌಡಿ
ಗುಣವಾಚಕ
  1. ಮೋಡದ; ಮೋಡಕ್ಕೆ ಸಂಬಂಧಿಸಿದ.
  2. ಮೋಡದಂತಿರುವ.
  3. ಮೋಡ–ಕವಿದ, ಮುಸುಕಿದ; ಮೇಘಾವೃತವಾದ.
  4. ಮಸುಕಾದ; ಮಬ್ಬಾದ; ಸ್ವಚ್ಛವಾಗಿರದ ಯಾ ಪಾರಕವಲ್ಲದ: cloudy liquid ಮಸುಕಾದ ದ್ರವ.
  5. (ಚಿಂತನೆ, ಅರ್ಥ, ಮೊದಲಾದವುಗಳ ವಿಷಯದಲ್ಲಿ) ತಿಳಿಯಾಗಿಲ್ಲದ; ಅಸ್ಪಷ್ಟವಾದ; ಅಸ್ಫುಟವಾದ; ಗ್ರಹಿಸಲು ಕಷ್ಟವಾಗಿರುವ.
  6. ಮೋಡದಂಥ ಮಚ್ಚೆಗಳಿರುವ; ಮೇಘಕಲೆಗಳಿರುವ: cloudy marble ಮೋಡದ ಮಚ್ಚೆಯ ಹಾಲುಗಲ್ಲು.
  7. (ಅಜ್ಞಾನ, ಕಷ್ಟ, ಕೊರಗು, ಕೋಪ, ಅಶುಭ ಸೂಚನೆ, ಮೊದಲಾದವುಗಳಿಂದ) ಮಂಕಾದ; ಕಪ್ಪಿಟ್ಟ; ಕಳೆಗುಂದಿದ; ನಿಸ್ತೇಜವಾದ; ಮ್ಲಾನವಾದ; ವಿಷಣ್ಣವಾದ.
  8. ಕಳಂಕವಿಡಿದ; ಸಂಶಯ, ಅವಮಾನ, ಮೊದಲಾದವುಗಳಿಗೆ ಒಳಗಾದ.