clothe ಕ್ಲೋದ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ clothed, ಪ್ರಾಚೀನ ಪ್ರಯೋಗ, ತಾಂತ್ರಿಕ,
  1. ಉಡುಪು–ಒದಗಿಸು, ಕೊಡು.
  2. ಉಡುಪು ತೊಡಿಸು; ಬಟ್ಟೆ ಹಾಕು.
  3. ಉಡುಪು–ತೊಡು, ಧರಿಸು, ಹಾಕಿಕೊ.
  4. (ಬಟ್ಟೆಯಂತೆ ಯಾ ಉಡುಪಿನಂತೆ) ಹೊದಿಸು; ಮುಚ್ಚು; ಆವರಿಸು; ಕವಿ; ಆಚ್ಛಾದಿಸು: leaves clothe trees ಎಲೆಗಳು ಮರವನ್ನು ಮುಚ್ಚುತ್ತವೆ, ಹೊದಿಸುತ್ತವೆ. clothed with plantations ತೋಟಗಳಿಂದ ಆವರಿಸಿದ. clothed with righteousness ಧರ್ಮವನ್ನು ಹೊದೆದು. body clothes soul ದೇಹ ಆತ್ಮವನ್ನು ಆಚ್ಛಾದಿಸುತ್ತದೆ. clothe face in smile ಮುಖವನ್ನು ಮುಗುಳು ನಗೆಯಿಂದ ಕವಿಸು.
  5. (ಗುಣ, ಹಕ್ಕು, ಜವಾಬ್ದಾರಿ, ಶಕ್ತಿ, ಮೊದಲಾದವನ್ನು) ಕೊಡು; ನೀಡು.