clinical ಕ್ಲಿನಿಕಲ್‍
ಗುಣವಾಚಕ
  1. (ವೈದ್ಯಶಾಸ್ತ್ರ) (ಮುಖ್ಯವಾಗಿ ಪಾಠ ಪ್ರವಚನಗಳ ವಿಷಯದಲ್ಲಿ) ರೋಗಶಯ್ಯೆಯ; ರೋಗಿ ಸಮೀಪದ; ರೋಗಿಯ ಬಳಿಯ.
  2. ರೋಗಿಕೋಣೆಗೆ ಸಂಬಂಧಿಸಿದ; ರೋಗಿಕೋಣೆಯಲ್ಲಿ ಬಳಸುವ.
  3. ಪ್ರಾಯೋಗಿಕ; ಸಿದ್ಧಾಂತವನ್ನು ಯಾ ಕೃತಕ ಪ್ರಯೋಗವನ್ನು ಆಧರಿಸದೆ ರೋಗದ ನೇರಪರೀಕ್ಷೆ ಮತ್ತು ನಿದಾನಕೆ ಸಂಬಂಧಿಸಿದ ಯಾ ಅವನ್ನು ಆಧರಿಸಿದ.
  4. (ಮನೋಭಾವ, ತೀರ್ಪು, ವಿವರಣೆ ಮೊದಲಾದವುಗಳ ವಿಷಯದಲ್ಲಿ) ನಿರ್ಲಿಪ್ತವಾದ; ಭಾವರಹಿತವಾದ; ಅತ್ಯಂತ ವಸ್ತುನಿಷ್ಠವಾದ; ವಾಸ್ತವದೃಷ್ಟಿಯ; ನಿಷ್ಪಕ್ಷಪಾತವಾದ: she subjected her faults to clinical examination ಅವಳು ತನ್ನ ತಪ್ಪುಗಳನ್ನು ಅತ್ಯಂತ ವಸ್ತುನಿಷ್ಠ ಪರೀಕ್ಷೆಗೆ ಒಳಪಡಿಸಿದಳು.
  5. (ಕ್ರೈಸ್ತಧರ್ಮ) (ಮತಸಂಸ್ಕಾರದ,ಮತಾಂತರದ ಯಾ ಮತಾಂತರಿಯ ವಿಷಯದಲ್ಲಿ) ರೋಗಶಯ್ಯೆಯಲ್ಲಿ ಯಾ ಮರಣಶಯ್ಯೆಯಲ್ಲಿ ನೀಡಿದ, ಮಾಡಿದ.