clause ಕ್ಲಾ
ನಾಮವಾಚಕ
  1. (ವ್ಯಾಕರಣ) ಉಪವಾಕ್ಯ; ವಾಕ್ಯಖಂಡ; ವಾಕ್ಯಾಂಶ; ವಾಕ್ಯಾಂಗ; ತನ್ನದೇ ಆದ ಕರ್ತೃ ಕ್ರಿಯಾಪದಗಳಿಂದ ಕೂಡಿದ, ಸಂಕೀರ್ಣ ವಾಕ್ಯದ ಭಾಗ ಯಾ ಘಟಕ; ಮುಖ್ಯವಾಗಿ ಪ್ರಧಾನ ವಾಕ್ಯಕ್ಕೆ ನಾಮಪದ, ಗುಣವಾಚಕ, ಯಾ ಕ್ರಿಯಾವಿಶೇಷಣವಾಗಿ ವರ್ತಿಸುವ ಪದಸಮುದಾಯ.
  2. (ಕೌಲು, ಕಾನೂನು, ಉಯಿಲು, ಕರಾರು ಮೊದಲಾದ ಲಿಖಿತ ದಾಖಲೆಗಳಲ್ಲಿನ) ಷರತ್ತು; ಖಂಡ; ಕಲಂ; ವಿಧಿ; ಅಂಶ; ಒಳಪ್ರಕರಣ.