classification ಕ್ಲಸಿಹಿಕೇಷನ್‍
ನಾಮವಾಚಕ
  1. ವರ್ಗೀಕರಣ; ವಿಂಗಡನೆ:
    1. ವಿಂಗಡಿಕೆ: ವರ್ಗಗಳಾಗಿ ವಿಂಗಡಿಸುವುದು.
    2. ವರ್ಗೀಕರಣದ–ಫಲ, ಫಲಿತಾಂಶ.
    3. ವರ್ಗೀಕರಣದ ವ್ಯವಸ್ಥೆ.
    4. (ಜೀವವಿಜ್ಞಾನ) ರಚನೆ, ಮೂಲ ಮೊದಲಾದವುಗಳಿಗೆ ಅನುಗುಣವಾಗಿ ಸಸ್ಯಗಳು ಮತ್ತು ಜೀವಿಗಳನ್ನು ಹಲವಾರು ಗುಂಪುಗಳಾಗಿ ವರ್ಗೀಕರಣ ಮಾಡುವಿಕೆ.
    5. (ಗ್ರಂಥಾಲಯಶಾಸ್ತ್ರ) ಪುಸ್ತಕ ಮತ್ತು ಇತರ ದಾಖಲೆಗಳನ್ನು ವಿಷಯ ಯಾ ಗಾತ್ರಗಳಿಗೆ ಅನುಗುಣವಾಗಿ ವಿಂಗಡಿಸಿ ಜೋಡಿಸುವ ವ್ಯವಸ್ಥೆ.
  2. ವರ್ಗ; ತರಗತಿ; ವ್ಯಕ್ತಿಗಳನ್ನು ಯಾ ವಸ್ತುಗಳನ್ನು ವಿಂಗಡಿಸುವ ಯಾ ವಿಂಗಡಿಸಲಾಗುವ ಗುಂಪುಗಳಲ್ಲಿ ಒಂದು.
  3. (ಅಮೆರಿಕನ್‍ ಪ್ರಯೋಗ) ರಹಸ್ಯವರ್ಗೀಕರಣ; (ಸರ್ಕಾರಿ ಯಾ ಸೈನ್ಯ ಖಾತೆಗಳಲ್ಲಿ) ದಾಖಲೆಗಳ ಗೋಪ್ಯತೆಯ ದರ್ಜೆಯ ಆಧಾರದ ಮೇಲೆ ಮಾಡುವ ವಿಂಗಡಣೆ, ವರ್ಗೀಕರಣ.