citizen ಸಿಟಿಸನ್‍
ನಾಮವಾಚಕ
  1. ಪೌರ; ನಾಗರಿಕ; ಪುರದ, ನಗರದ ಹಕ್ಕುಗಳನ್ನು ಪಡೆದಿರುವ ಸ್ವತಂತ್ರ ನಿವಾಸಿ.
  2. ಪಟ್ಟಣಿಗ; ಪಟ್ಟಣವಾಸಿ; ನಗರವಾಸಿ.
  3. ಅಸೈನಿಕ ಪ್ರಜೆ; ನಾಗರಿಕ; ಮೂಲ್ಕಿ ಪ್ರಜೆ; ಸೈನಿಕ, ಪೊಲೀಸು ಮೊದಲಾದವನಲ್ಲದ ಪ್ರಜೆ.
  4. ನಾಡಿಗ; ನಾಡವ; ರಾಷ್ಟ್ರದವ; ಪ್ರಜೆ; ರಾಷ್ಟ್ರವೊಂದಕ್ಕೆ ಸೇರಿದವನು.
  5. (ಒಂದು ಸ್ಥಳದ) ನಿವಾಸಿ; ಸ್ಥಳೀಕ; ಊರುಗ.
ಪದಗುಚ್ಛ

citizen of the world ಲೋಕ ಪ್ರಜೆ; ವಿಶ್ವ ಪ್ರಜೆ; ಜಗತ್ತಿನ ಪೌರ; ಪ್ರಪಂಚದ ಪ್ರಜೆ.