circuit ಸರ್ಕಿಟ್‍
ನಾಮವಾಚಕ
  1. ಪರಿಧಿ; ಪರಿವೇಷ್ಟನರೇಖೆ; ವಲಯ; ಮಂಡಲ.
  2. ಸುತ್ತಳತೆ.
  3. (ಸುತ್ತುರೇಖೆಯೊಳಗಿರುವ) ಕ್ಷೇತ್ರಫಲ; ವಿಸ್ತೀರ್ಣ; ಕ್ಷೇತ್ರವ್ಯಾಪ್ತಿ.
  4. ಬಳಸು ಪ್ರಯಾಣ; ಸುತ್ತು ಪ್ರಯಾಣ.
  5. ಮೋಟಾರು ಸ್ಪರ್ಧೆಯ ಹಾದಿ, ಮಾರ್ಗ.
  6. (ಬದಲಾವಣೆ, ಕ್ರಿಯೆ ಮೊದಲಾದವುಗಳ) ಆವರ್ತ; ಸುತ್ತು; ಚಕ್ರ; ವಲಯ; ಮಂಡಲ.
  7. (ಕ್ರೀಡೆಗಳ ಯಾ ವ್ಯಾಯಾಮಗಳ) ಶ್ರೇಣಿ; ಸುತ್ತು; ವರಿಸೆ; ಸರಣಿ; ಚಕ್ರ: the American golf circuit ಅಮೆರಿಕದ ಗಾಲ್‍ ಆಟಗಳ ಸರಣಿ.
  8. (ಒಂದೇ ಆಡಳಿತವರ್ಗಕ್ಕೆ ಸೇರಿದ ನಾಟಕಶಾಲೆ, ಸಿನಿಮಾ ಮಂದಿರ ಮೊದಲಾದವುಗಳ) ಶ್ರೇಣಿ; ಸಾಲು; ಪಂಕ್ತಿ; ಗುಂಪು; ಸಮೂಹ; ಸರಣಿ.
  9. ನ್ಯಾಯಾಧೀಶರ ಸಂಚಾರ; ಗೊತ್ತಾದ ಪ್ರಾಂತಗಳಲ್ಲಿ ಕೋರ್ಟು ನಡೆಸಲು ನ್ಯಾಯಾಧಿಪತಿ ಮಾಡುವ ಪ್ರಯಾಣ.
  10. (ಸಂಚಾರಿ ನ್ಯಾಯಾಧೀಶನ) ಪರ್ಯಟನ ಪ್ರಾಂತ; ಸಂಚಾರಪ್ರಾಂತ.
  11. ಸಂಚಾರಿ ನ್ಯಾಯವಾದಿಗಳು; ಸಂಚಾರಿ ನ್ಯಾಯಾಲಯಗಳಲ್ಲಿ ವಾದಿಸುವ ಲಾಯರುಗಳು.
  12. (ಸಣ್ಣ ಆಡಳಿತಭಾಗವಾಗಿ ಕೂಡಿಸಿರುವ, ಸ್ಥಳೀಯ ಮೆತಡಿಸ್ಟ್‍ ಚರ್ಚುಗಳ) ವಲಯ; ಗುಂಪು; ಸಮೂಹ.
  13. (ವಿದ್ಯುದ್ವಿಜ್ಞಾನ) ವಿದ್ಯುನ್ಮಂಡಲ; ವಿದ್ಯುದ್ವಲಯ; ವಿದ್ಯುತ್‍ ಪ್ರವಾಹವು ಅನುಸರಿಸುವ, ಒಂದು ಬಿಂದುವಿನಿಂದ ಹೊರಟು ಅಲ್ಲಿಗೇ ಬರುವ, ಮಾರ್ಗ, ಪಥ.
  14. ಮಂಡಲ; ವಿದ್ಯುನ್ಮಂಡಲದ ಯಾ ವಿದ್ಯುತ್‍ ಹರಿಯುವ ಸಲಕರಣೆ: generator circuit ವಿದ್ಯುಜ್ಜನಕ ಮಂಡಲ; ವಿದ್ಯುನ್ಮಂಡಲದಲ್ಲಿ ವಿದ್ಯುತ್‍ ಉತ್ಪಾದಿತವಾಗುವ ಭಾಗ.
  15. = closed-circuit.
  16. ಸಂಘ; ಸಂಸ್ಥೆ; ಒಕ್ಕೂಟ; football circuit ಹುಟ್‍ಬಾಲ್‍ ಸಂಘ.
  17. ಪ್ರದಕ್ಷಿಣೆ; ಪರಿಚಲನೆ; ಪರಿಭ್ರಮಣ; ಯಾವುದರದೇ ಸುತ್ತ ಸಾಗುವುದು.