child ಚೈಲ್ಡ್‍
ನಾಮವಾಚಕ
(ಬಹುವಚನ children ಉಚ್ಚಾರಣೆ ಚಿಲ್ಡ್ರನ್‍).
  1. (ಇನ್ನೂ ಹುಟ್ಟದ ಯಾ ಆಗತಾನೆ ಹುಟ್ಟಿದ) ಕೂಸು; ಮಗು; ಹಸುಳೆ; ಶಿಶು.
  2. ಹುಡುಗ ಯಾ ಹುಡುಗಿ.
  3. ಮಗು; ಅನನುಭವಿ; ವಿವೇಕದ ವಯಸ್ಸು ತಲುಪದವನು(ಳು).
  4. (ಯಾವುದೇ ವಯಸ್ಸಿನ) ಮಗ ಯಾ ಮಗಳು; ಪುತ್ರ ಯಾ ಪುತ್ರಿ; ಕುಮಾರ ಯಾ ಕುಮಾರಿ: my child ಮಗೂ, ಮಗನೇ, ಮಗಳೇ.
  5. ವಂಶಜ; ಸಂತತಿಯವನು; ಪರಂಪರೆಯವನು; ಪೀಳಿಗೆಯವನು (ರೂಪಕವಾಗಿ ಸಹ): child of God ದೇವಸಂತತಿಯವನು. child of the devil ಸೈತಾನಪೀಳಿಗೆಯವನು. children of Israel ಇಸ್ರೇಲ್‍ ವಂಶಜರು.
  6. ಅವಲಂಬಿ; ಅನುಯಾಯಿ; ಶಿಷ್ಯ.
  7. ಫಲ; ಪರಿಣಾಮ; ಕಾರ್ಯ: Holland is the child of it’s rivers and of the sea ಹಾಲಂಡಿನ ವೈಶಿಷ್ಟ್ಯ ಅದರ ನದಿಗಳ ಮತ್ತು ಕಡಲಿನ ಪ್ರಭಾವದ ಫಲ.
ಪದಗುಚ್ಛ
  1. fancy’s child ಕಲ್ಪನೆಯ ಕೂಸು; ಕಲ್ಪನೆಯಿಂದ ಕೂಡಿದವನು.
  2. from a child ಮಗುವಾಗಿದ್ದಾಗಿನಿಂದ; ಶೈಶವದಿಂದ.
  3. this child (ಅಶಿಷ್ಟ) ನಾನು, ನನ್ನನ್ನು, ನನಗೆ.
  4. with child ಬಸಿರಾಗಿ; ಗರ್ಭ ಧರಿಸಿ.
ನುಡಿಗಟ್ಟು
  1. burnt child dreads the fire ಕೈ ಸುಟ್ಟುಕೊಂಡ ಮಗು ಬೆಂಕಿಗೆ ಹೆದರುತ್ತದೆ; ಒಂದು ಕೆಲಸದ ಕಷ್ಟ ನಷ್ಟ ಅನುಭವಿಸಿದವನು ಮತ್ತೆ ಆ ಕೆಲಸಕ್ಕೆ ಕೈಹಾಕಲು ಹಿಂದೆಗೆಯುತ್ತಾನೆ.
  2. child of nature ಪ್ರಕೃತಿಯ ಮಗು; ನಿಸರ್ಗದ ಶಿಶು; ನೈಜ ವ್ಯಕ್ತಿ; ಸರಳ ಮನುಷ್ಯ.