See also 2caution
1caution ಕಾಷನ್‍
ನಾಮವಾಚಕ
  1. ಎಚ್ಚರಿಕೆ; ಜಾಗರೂಕತೆ; ಹುಷಾರು; ಮುಂಜಾಗ್ರತೆ; ಸುರಕ್ಷಿತತೆಗೆ ಗಮನ ಕೊಡುವುದು; ದುಡುಕದಿರುವುದು.
  2. (ಕವಾಯತು) ಜೋಕೆ; ಸಾವಧಾನ; ಹುಷಾರಿ; ಅಪ್ಪಣೆಗೆ ಮುನ್ನ ಹೇಳುವ ಮಾತು.
  3. ಆಕ್ಷೇಪಯುಕ್ತ ಎಚ್ಚರಿಕೆ: dismissed him with a caution ಅವನನ್ನು ಆಕ್ಷೇಪಿಸಿ, ಎಚ್ಚರಕೊಟ್ಟು ಕಳುಹಿಸಿ ಬಿಟ್ಟ.
  4. (ಆಡುಮಾತು) ವಿಚಿತ್ರ, ವಿಲಕ್ಷಣ ಯಾ ತಮಾಷೆಯ–ವ್ಯಕ್ತಿ, ವಸ್ತು ಯಾ ವಿಷಯ.
  5. (ಸ್ಕಾಟ್ಲಂಡ್‍ ಮತ್ತು ಅಮೆರಿಕದ ನ್ಯಾಯಶಾಸ್ತ್ರ) ಜಾಮೀನುದಾರ; ಜಾಮೀನು–ಕೊಟ್ಟಿರುವವನು ಯಾ ಪಡೆದಿರುವವನು.
  6. ಜೋಕೆ; ಜಾಗ್ರತೆ; ಅಪಾಯ ಮೊದಲಾದವುಗಳ ಬಗ್ಗೆ ಎಚ್ಚರಿಕೆ ಕೊಡುವುದು.
  7. ಎಚ್ಚರಿಕೆ (ಕೊಡುವ)–ಸಂಗತಿ, ವಿಷಯ.
See also 1caution
2caution ಕಾಷನ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ ಒಂದರ ವಿರುದ್ಧ ಯಾ ಒಂದನ್ನು ಮಾಡದಿರುವಂತೆ) ಎಚ್ಚರಿಕೆ ಕೊಡು; ಎಚ್ಚರಿಸು.
  2. ಆಕ್ಷೇಪಿಸಿ ಎಚ್ಚರಿಕೆ ಕೊಡು.