category ಕ್ಯಾಟಿಗರಿ
ನಾಮವಾಚಕ
  1. ವರ್ಗ; ತರಗತಿ; ಜಾತಿ; ವಿಭಾಗ; ಪಂಗಡ; ಬಗೆ.
  2. (ತರ್ಕಶಾಸ್ತ್ರ) ಮೂಲತತ್ತ್ವ; ಪದಾರ್ಥ; ಪ್ರಪಂಚದ ಪದಾರ್ಥಗಳೆಲ್ಲವನ್ನೂ ಒಂದಿಲ್ಲದಿದ್ದರೆ ಮತ್ತೊಂದರಲ್ಲಿ ಸೇರಿಸಲಾಗುವಂತೆ ಏರ್ಪಡಿಸಿರುವ (ಉದಾಹರಣೆಗೆ ಅರಿಸ್ಟಾಟಲನ ಪ್ರಕಾರ ದ್ರವ್ಯ, ಪರಿಮಾಣ, ಗುಣ, ಸಂಬಂಧ, ದೇಶ, ಕಾಲ, ಅವಸ್ಥೆ, ಸ್ವಾಧೀನ, ಕ್ರಿಯೆ, ನಿಷ್ಕ್ರಿಯೆ ಎಂಬ) ವರ್ಗಗಳಲ್ಲೊಂದು.