carpet-bagger ಕಾರ್ಪಿಟ್‍ಬ್ಯಾಗರ್‍
ನಾಮವಾಚಕ
  1. ಹೊರಗಿನ ಪುಢಾರಿ; ಸ್ಥಳೀಯನಲ್ಲದ ರಾಜಕೀಯ ಉಮೇದುವಾರ ಮೊದಲಾದವರು; ಸಾಮಾನ್ಯವಾಗಿ ಒಂದು ಸ್ಥಳಕ್ಕೆ ಸೇರಿರದ, ಆ ಸ್ಥಳದ ರಾಜಕೀಯದಲ್ಲಿ ತಲೆಹಾಕುವ, ಕೈ ಹಾಕುವ–ವ್ಯಕ್ತಿ.
  2. (ಅಮೆರಿಕದ ಚರಿತ್ರೆ) ಅಮೆರಿಕದ ಅಂತರ್ಯುದ್ಧದ $(1895)$ ತರುವಾಯ ಪುನಾರಚನೆಯ ಅವಧಿಯಲ್ಲಿ, ಮುಖ್ಯವಾಗಿ ರಾಜಕೀಯ ಸ್ಥಾನವನ್ನು ಪಡೆಯಲು ಅಥವಾ ಪ್ರಕ್ಷುಬ್ಧವಾಗಿದ್ದ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಲಾಭ ಪಡೆಯಲು, ದಕ್ಷಿಣದ ರಾಜ್ಯಗಳಿಗೆ ಹೋದ ಉತ್ತರ ಅಮೆರಿಕದವನು.