cancer ಕ್ಯಾನ್ಸರ್‍
ನಾಮವಾಚಕ
  1. (ರೋಗಶಾಸ್ತ್ರ) ಏಡಿಗಂತಿ; ಅರ್ಬುದ; ಕ್ಯಾನ್ಸರ್‍; ದೇಹದ ಯಾವುದೇ ಭಾಗದಲ್ಲಿ ಜೀವಕೋಶಗಳು ಹದ್ದುಮೀರಿ ಗುಣಿತವಾಗಿ ಹರಡುವ ಮಾರಕಗಂತಿ.
  2. (ರೂಪಕವಾಗಿ) (ಕ್ಯಾನ್ಸರಿನಂತೆ ವ್ಯಾಪಿಸಿಕೊಂಡು ಬೆಳೆಯುವ ಪ್ರವೃತ್ತಿಯುಳ್ಳ ಲಂಚ, ಭ್ರಷ್ಟಾಚಾರ, ಮೊದಲಾದ) ಕೇಡು; ಅನಿಷ್ಟ.
  3. (Cancer) (ಖಗೋಳ ವಿಜ್ಞಾನ) (ನಕ್ಷತ್ರ ರಾಶಿಗಳಲ್ಲಿ ನಾಲ್ಕನೆಯದಾದ) ಕರ್ಕಾಟಕ; ಕಟಕ.
  4. =tropic of Cancer.