business ಬಿಸ್‍ನಿಸ್‍
ನಾಮವಾಚಕ
  1. ಕೆಲಸ; ಕಾರ್ಯ.
  2. ಕರ್ತವ್ಯ.
  3. ಕೆಲಸ; ಕ್ಷೇತ್ರ: it is not my business to keep watch on the office ಕಚೇರಿಯ ಕಾವಲು ಕಾಯುವುದು ನನ್ನ ಕೆಲಸವಲ್ಲ.
  4. (ಪ್ರಶ್ನೆಯಾಗಿ ಯಾ ಆಕ್ಷೇಪವಾಗಿ – ಬಂದುದರ, ಹೋದುದರ) ಕಾರಣ; ಉದ್ದೇಶ; ಕೆಲಸ: what is your business here? ನಿನಗೇನು ಕೆಲಸ ಇಲ್ಲಿ?
  5. ಕೆಲಸ; ಕಸುಬು; ವೃತ್ತಿ; ದಂಧೆ; ಉದ್ಯೋಗ.
  6. (ವ್ಯಾಪಾರ, ವಾಣಿಜ್ಯ ಮೊದಲಾದ ಕ್ಷೇತ್ರಗಳ) ಉದ್ದಿಮೆ; ಉದ್ಯಮ; ಉದ್ಯೋಗ.
  7. (ಹುಡುಗಾಟಿಕೆಯ ವಿಷಯವಲ್ಲದ) ಗಂಭೀರವಾದ ಕೆಲಸ: this is no pastime, it is business ಇದು ಬರೀ ಹೊತ್ತು ಕಳೆಯುವ ವಿಷಯವಲ್ಲ, ಇದು ಗಂಭೀರವಾದ ಕೆಲಸ.
  8. ಅಜೆಂಡ; ಕಾರ್ಯಕ್ರಮ; ಮುಂದಿರುವ, ಪರಿಶೀಲಿಸಬೇಕಾದ, ಮಾಡಬೇಕಾದ – ಕೆಲಸ: the business of the day, meeting ಇಂದಿನ, ಸಭೆಯ – ಕಾರ್ಯಕ್ರಮ.
  9. (ಜನರ ಜೊತೆಯ) ವ್ಯವಹಾರ.
  10. ಪ್ರಯಾಸದ ಕೆಲಸ; ದುರ್ಭರಕಾರ್ಯ: what a business it is ಅದು ಎಂಥ ದುರ್ಭರವಾದ ಕೆಲಸ.
  11. (ವ್ಯಂಗ್ಯದಲ್ಲಿ) ದೊಡ್ಡ ಕೆಲಸ; ಮಹಾಕಾರ್ಯ: you are making a great business of it ಅದನ್ನು ಒಂದು ಮಹಾಕೆಲಸ ಎಂದು ತಿಳಿದುಕೊಂಡಿದ್ದೀಯೆ.
  12. ಒಬ್ಬನ ಕೆಲಸ; ಒಬ್ಬನಿಗೆ ಸೇರಿದ, ಸಂಬಂಧಿಸಿದ – ವಿಷಯ; ಒಬ್ಬನು ಕೈಹಾಕಬಹುದಾದ, ತಲೆಹಾಕಬಹುದಾದ, ಪ್ರವೇಶಿಸಬಹುದಾದ – ವಿಷಯ: none of your business ನಿನ್ನ ಕೆಲಸ ಅಲ್ಲ ಇದು.
  13. ಹಕ್ಕು; ಅಧಿಕಾರ: he has no business to advise me ನನಗೆ ಬುದ್ಧಿ ಹೇಳಲು ಅವನಿಗೆ ಅಧಿಕಾರವಿಲ್ಲ.
  14. (ತುಚ್ಛವಾಗಿ) (ವಿಚಿತ್ರ, ಫಜೀತಿ, ಗೋಳು, ಹೊಲಸು, ಇತ್ಯಾದಿ ಅರ್ಥದಲ್ಲಿ) ಕೆಲಸ; ವ್ಯವಹಾರ; ವಿಷಯ; ಸಂಗತಿ; ಪರಿಸ್ಥಿತಿ; ಪ್ರಮೇಯ: I am sick of the whole business ಆ ಗೋಳು ಕೆಲಸ ನನಗೆ ಬೇಜಾರಾಗಿದೆ. it is a queer business ಇದೊಂದು ವಿಚಿತ್ರವಾದ ವ್ಯವಹಾರ.
  15. (ನಾಟಕದಲ್ಲಿನ) ನಟನೆ; ಅಭಿನಯ; ರಂಗದ (ಮೇಲೆ ನಡೆಯುವ) ಕ್ರಿಯೆ; ನಟನಟಿಯರ ಸಂಭಾಷಣೆಗೆ ಹೊರತಾಗಿ ಆಂಗಿಕಾಭಿನಯ, ಚಲನವಲನ, ಹಾವಭಾವ, ಮುಖ, ಮೊದಲಾದವುಗಳ ಭಂಗಿ, ಮೊದಲಾದ ಕ್ರಿಯೆ.
  16. ವ್ಯಾಪಾರ; ಕ್ರಯವಿಕ್ರಯ; ಕೊಳ್ಳುವುದು ಮಾರುವುದು: doing a great business ಭಾರಿ ವ್ಯಾಪಾರ ಮಾಡುತ್ತ. good stroke of business ಒಳ್ಳೆಯ ಲಾಭದ ವ್ಯಾಪಾರ.
  17. ವಾಣಿಜ್ಯ ಸಂಸ್ಥೆ; ವ್ಯಾಪಾರದ ಯಾ ವಹಿವಾಟಿನ – ಸಂಸ್ಥೆ.
  18. (ಅಂಗಡಿ, ಕಾರ್ಖಾನೆ, ಮಳಿಗೆ ಮೊದಲಾದ) ವ್ಯಾಪಾರ, ವ್ಯವಹಾರ ನಡೆಯುವ – ಸ್ಥಳ, ಜಾಗ: his business is at the end of the road ಅವನ ಅಂಗಡಿ ರಸ್ತೆಯ ಕೊನೆಯಲ್ಲಿದೆ.
  19. (ಮರಣದಂಡನೆಯೂ ಸೇರಿದಂತೆ) ಎಲ್ಲ ಬಗೆಯ ಶಿಕ್ಷೆ ಯಾ ಚಿತ್ರಹಿಂಸೆ.
  20. (ಅಶಿಷ್ಟ) ಸಿಗುವುದೆಲ್ಲ; ಲಭ್ಯವಾದುದೆಲ್ಲ.
ಪದಗುಚ್ಛ
  1. in business
    1. ವ್ಯಾಪಾರದಲ್ಲಿ ತೊಡಗಿ; ವ್ಯವಹರಿಸುತ್ತ.
    2. (ರೂಪಕವಾಗಿ) ಕಾರ್ಯಶೀಲವಾಗಿರುವ; ಕೆಲಸ ಪ್ರಾರಂಭಿಸುವಂತಿರುವ.
  2. man of business
    1. (ವಾಣಿಜ್ಯಸಂಸ್ಥೆ, ವಿಮಾಸಂಸ್ಥೆ, ಮೊದಲಾದವುಗಳ) ಏಜಂಟು; ಪ್ರತಿನಿಧಿ; ಕಾರ್ಯಭಾರಿ.
    2. (ಕಕ್ಷಿಗಾರನಿಂದ ವಕಾಲತ್ತು ಪಡೆದ) ವಕೀಲ.
    3. ವ್ಯವಹಾರಸ್ಥ; ವ್ಯವಹಾರಪಟು; ಕೆಲಸಕಾರ್ಯಗಳನ್ನರಿತು ಜನರಲ್ಲಿ ಓಡಾಡುವವನು.
ನುಡಿಗಟ್ಟು
  1. business as usual ವ್ಯಾಪಾರ – ಮಾಮೂಲೇ, ಎಂದಿನಂತೆಯೇ; ಅಡಚಣೆಗಳಿದ್ದರೂ ವ್ಯವಹಾರ ಎಂದಿನಂತೆ ಸಾಗುತ್ತಿದೆ.
  2. business is business ವ್ಯವಹಾರ ಎಂದರೆ ವ್ಯವಹಾರ; ವ್ಯಾಪಾರ ಎಂದರೆ ವ್ಯಾಪಾರ; ಲೆಕ್ಕಾಚಾರ ಎಂದರೆ ಲೆಕ್ಕಾಚಾರ; ವ್ಯವಹಾರದಲ್ಲಿ ಯಾ ಲಾಭದ ವಿಷಯದಲ್ಲಿ ದಾಕ್ಷಿಣ್ಯ, ಸ್ನೇಹ, ಮೊದಲಾದವುಗಳಿಗೆ – ಜಾಗವಿಲ್ಲ, ಎಡೆಯಿಲ್ಲ.
  3. do business with
    1. ವ್ಯಾಪಾರ ನಡಸು.
    2. ವ್ಯವಹಾರ ಯಾ ಸಂಬಂಧ – ಹೊಂದಿರು.
  4. do one’s business for one (ಅಶಿಷ್ಟ) (ಒಬ್ಬನನ್ನು) ಮುಗಿಸಿಬಿಡು; ತೀರಿಸಿಬಿಡು; ಕೊಂದುಹಾಕು: “I will do your business for you", he threatened his captive “ಮುಗಿಸಿಬಿಡುತ್ತೇನೆ ನಿನ್ನನ್ನು" ಎಂದು ಅವನು ತನ್ನ ಸೆರೆಯಾಳನ್ನು ಬೆದರಿಸಿದ.
  5. get down to business
    1. (ಮಾತು ಮೊದಲಾದವನ್ನು ನಿಲ್ಲಿಸಿ) ಕೆಲಸಕ್ಕೆ ತೊಡಗು; ಶ್ರದ್ಧೆಯಿಂದ ಕೆಲಸ – ಶುರುಮಾಡು, ಪ್ರಾರಂಭಿಸು.
    2. (ಉಪಚಾರದ ಮಾತನ್ನು ಬಿಟ್ಟು) ವಿಷಯಕ್ಕೆ ಬಾ.
  6. go about one’s business ತನ್ನ ಪಾಡಿಗೆ ತಾನಿರು; (ಇನ್ನೊಬ್ಬರ ಗೊಡವೆಗೆ ಹೋಗದೆ) ತನ್ನ ಕೆಲಸ ತಾನು ನೋಡಿಕೊ.
  7. like nobody’s business (ಆಡುಮಾತು) ವಿಲಕ್ಷಣವಾಗಿ; ಅಸಾಧಾರಣವಾಗಿ; ಸಾಧಾರಣ ರೀತಿಯಲ್ಲಲ್ಲದೆ; ಸಾಮಾನ್ಯ ವ್ಯಾಪ್ತಿಗೆ ಮೀರಿ.
  8. make it one’s business (ಬೇರೊಬ್ಬರ ಕೆಲಸವನ್ನು) ತನ್ನದೆಂದೇ ಎಣಿಸಿ ಮಾಡು, ತನ್ನ ಕರ್ತವ್ಯವೆಂದೇ ಎಣಿಸಿ ಮಾಡು.
  9. mean business (ಕೆಲಸದ ಬಗ್ಗೆ) ಶ್ರದ್ಧೆವಹಿಸು; ಕೆಲಸವನ್ನು ಲಘುವಾಗಿ ಕಾಣದೆ ಗಂಭೀರದ ಕೆಲಸವೆಂದು ಭಾವಿಸು: I mean business, it is not a joke ನಾನು ಹೇಳುತ್ತಿರುವುದು ಬರಿ ತಮಾಷೆಗಲ್ಲ, ಗಂಭೀರವಾದ ಕೆಲಸ.
  10. mind your own business ನಿನ್ನ ಕೆಲಸ ನೋಡಿಕೊ ಹೋಗು: why do you poke your nose?, mind your own business ಇದಕ್ಕೇಕೆ ತಲೆ ಹಾಕುತ್ತೀಯೆ?, ನಿನ್ನ ಕೆಲಸ ನೀನು ನೋಡಿಕೋ ಹೋಗು.
  11. on business ಕೆಲಸದ ಮೇಲೆ; ಕಾರ್ಯನಿಮಿತ್ತ; ಯಾವುದೇ ಕಾರ್ಯಕ್ಕಾಗಿ.
  12. send about one’s business (ಒಬ್ಬನನ್ನು) ಅವನ ಕೆಲಸ ನೋಡಿಕೊಳ್ಳಲು ಹೇಳು; ಸಂಬಂಧಪಡದ ಕೆಲಸದಲ್ಲಿ ತಲೆಹಾಕದಂತೆ ಹೇಳಿ – ಆಚೆಗೆ ಕಳುಹಿಸು, ಹೊರದೂಡು.
  13. has no business to (ಅದಕ್ಕೆ) ಹಕ್ಕಿಲ್ಲ; ಅಧಿಕಾರವಿಲ್ಲ.