1burlesque ಬರ್ಲೆಸ್ಕ್‍
ಗುಣವಾಚಕ
  1. ಅಣಕದ.
  2. ಅಣಕಿಸುವ; ಗೇಲಿಮಾಡುವುದಕ್ಕಾಗಿ ಅನುಕರಿಸುವ.
  3. ಆಡಂಬರ ಶೈಲಿಯ; ಅಣಕಗಾಂಭೀರ್ಯದ.
2burlesque ಬರ್ಲೆಸ್ಕ್‍
ನಾಮವಾಚಕ
  1. ಅಣಕ; ವಿಕಟಹಾಸ್ಯಕ್ಕಾಗಿ ಒಬ್ಬರನ್ನು ಅನುಕರಿಸಿ ಗೇಲಿಯೆಬ್ಬಿಸುವುದು.
  2. (ಕವಿತೆಯ ಯಾ ನಾಟಕದ) ಅಣಕ; ವಿಡಂಬನ; ವಿಕಟಾನುಕರಣ.
  3. (ಅಮೆರಿಕನ್‍ ಪ್ರಯೋಗ) (ಹಲವೊಮ್ಮೆ ಉಡಿಗೆ ತೊಡಿಗೆಗಳನ್ನು ಕಳಚಿ ಪ್ರೇಕ್ಷಕರನ್ನು ಕೆರಳಿಸಿ, ಕುಚೇಷ್ಟೆ ಮಾಡುವುದೇ, ಮೊದಲಾದ ಅಂಶಗಳನ್ನೊಳಗೊಂಡ) ವಿವಿಧ ವಿನೋದಾವಳಿ.
3burlesque ಬರ್ಲೆಸ್ಕ್‍
ಸಕರ್ಮಕ ಕ್ರಿಯಾಪದ

(ಬರಿಯ ವಿನೋದಕ್ಕಾಗಲೀ ಅಪಹಾಸ್ಯ ಮಾಡುವುದಕ್ಕಾಗಲೀ ಒಬ್ಬನ ನಡೆನುಡಿ ಮೊದಲಾದವನ್ನು) ಅಣಕಿಸು; ಅನುಕರಿಸು.