standard bread (ಗೋಧಿ ಹಿಟ್ಟಿನೊಡನೆ ಬೇರೆ ಹಿಟ್ಟುಗಳನ್ನು ಕಲಸಿ ಮಾಡಿದ) ಸ್ಟ್ಯಾಂಡರ್ಡ್ ಬ್ರೆಡ್ಡು.
white bread (ತವುಡು ತೆಗೆದು ಮಾಡಿದ) ಬಿಳಿ ಬ್ರೆಡ್ಡು.
ನುಡಿಗಟ್ಟು
bread buttered on both sides ಸುಖಜೀವನ; ನಿಶ್ಚಿಂತೆಯ ಬದುಕು; ಅದೃಷ್ಟದ ಜೀವನ; ಮಹಾಭಾಗ್ಯ; ಅನಾಯಾಸವಾಗಿ ಬಂದ ಏಳಿಗೆ.
bread of life (ಬೈಬ್ಲ್) ಆಧ್ಯಾತ್ಮಿಕ ಆಹಾರ; ಮೋಕ್ಷ ಸಾಧನ; ಆಧ್ಯಾತ್ಮಿಕ ಜೀವನಕ್ಕೆ ಸಾಧನ.
break bread
(ಪ್ರಾಚೀನ ಪ್ರಯೋಗ) (ಇತರರೊಡನೆ) ಊಟ ಮಾಡು.
(ಕ್ರೈಸ್ತಧರ್ಮ) ಪ್ರಭುಭೋಜನದಲ್ಲಿ ಭಾಗವಹಿಸು.
cast bread upon waters ಉಪಕಾರಸ್ಮರಣೆಯ ಯಾ ಪ್ರತಿಫಲದ ಅಪೇಕ್ಷೆಯಿಲ್ಲದೆ – ಉಪಕಾರ ಮಾಡು, ಧರ್ಮಮಾಡು.
eat the bread of (ಯಾವುದರದೇ ಫಲವನ್ನು) ಉಣ್ಣು; ಅನುಭವಿಸು.
eat the bread of affliction ಕೊರಗಿನ ಕೂಳು ತಿನ್ನು; ಕಣ್ಣೀರಲ್ಲಿ ಕೈತೊಳೆಯುತ್ತಾ ಬದುಕು.
eat the bread of idleness ಬಿಟ್ಟಿ ಕೂಳು ತಿಂದು ಬದುಕು; ದಂಡ ಪಿಂಡ ತಿನ್ನು; ದುಡಿಮೆಯಿಲ್ಲದೆ ಉಂಡಾಡಿಯಾಗಿರು; ಸೋಮಾರಿ ಜೀವನ ನಡೆಸು.
know which side one’s bread is buttered ರೊಟ್ಟಿಗೆ ಯಾವ ಕಡೆ ಬೆಣ್ಣೆ ಹಚ್ಚಿದೆ ಎಂಬುದನ್ನು ಅರಿತಿರು; ಸ್ವಾರ್ಥಸಾಧನೆಯ ದಾರಿಯನ್ನು ಅರಿತಿರು; ತನಗೆ ಲಾಭ ಯಾ ಪ್ರಯೋಜನ ಎಲ್ಲಿರುವುದೆಂಬುದನ್ನು ತಿಳಿದಿರು.
make one’s bread ಅನ್ನ ಸಂಪಾದಿಸು; ಜೀವಿಕೆಯನ್ನು ಸಂಪಾದಿಸು.
ship’s bread (ಸಾಮಾನ್ಯವಾಗಿ) ಹಡಗಿನ ಬಿಸ್ಕತ್ತು; ಗಟ್ಟಿ ಬಿಸ್ಕತ್ತು.
take the bread out of one’s mouth (ಒಬ್ಬನ ಮೇಲೆ ಪೈಪೋಟಿಮಾಡಿ) ಅವನ ಅನ್ನವನ್ನು ಕಿತ್ತುಕೊ; (ಒಬ್ಬನ) ತುತ್ತನ್ನು ಕಿತ್ತುಕೊ; (ಒಬ್ಬನ) ಜೀವನೋಪಾಯ, ಉದ್ಯೋಗ – ಕಸಿ.