See also 2book
1book ಬುಕ್‍
ನಾಮವಾಚಕ
  1. ಹೊತ್ತಗೆ; ಪುಸ್ತಕ; ವಹಿಗ್ರಂಥ; ಬುಕ್ಕು.
  2. ಅಚ್ಚುಮಾಡಿದಲ್ಲಿ ಒಂದು ಪುಸ್ತಕವಾಗುವಷ್ಟರ ಸಾಹಿತ್ಯಕ, ಬೌದ್ಧಿಕ, ಮೊದಲಾದ ಬರೆಹ, ಬರವಣಿಗೆ.
  3. ದೂರವಾಣಿ – ಸೂಚಿ, ನಿರ್ದೇಶಿಕೆ.
  4. (ಆಡುಮಾತು) ಮ್ಯಾಗಜಿನ್‍; ನಿಯತಕಾಲಿಕ(ಪತ್ರಿಕೆ).
  5. ಅರಿವಿನ ಆಕರ; ಜ್ಞಾನಮೂಲ; ಓದಿ, ನೋಡಿ ಅರಿವನ್ನು ಸಂಪಾದಿಸಬಹುದಾದ ಯಾವುದೇ ವಸ್ತು: the book of Nature and of the human heart ನಿಸರ್ಗದ ಮತ್ತು ಮಾನವ ಹೃದಯದ ಗ್ರಂಥ. the infinite book of the world and life ಲೋಕದ ಮತ್ತು ಬದುಕಿನ ಕೊನೆಮೊದಲಿಲ್ಲದ ಪುಸ್ತಕ.
  6. (ರೂಪಕವಾಗಿ) (ಕಾಲ್ಪನಿಕ) ಬರೆಹ; ಲಿಖಿತ; ದಾಖಲೆ; ಕಡತ; ಪಟ್ಟಿ, ಮೊದಲಾದವು: book of fate ವಿಧಿಯ ಬರೆಹ; ವಿಧಿಲಿಖಿತ. book of life (ಕ್ರೈಸ್ತಧರ್ಮ) ಮುಕ್ತರ ಪಟ್ಟಿ; ಮುಕ್ತಿಗೆ ಯೋಗ್ಯರಾದವರ (ಕಾಲ್ಪನಿಕ) ಪಟ್ಟಿ.
  7. (ಗ್ರಂಥದ ಯಾ ಬೈಬಲಿನ) ಖಂಡ; ಕಾಂಡ; ಪರ್ವ: Book of Genesis ಬೈಬಲಿನ ಸೃಷ್ಟಿಕಾಂಡ.
  8. = libretto.
  9. (ನಾಟಕ, ಚಲನಚಿತ್ರ, ಮೊದಲಾದವುಗಳ) ಮೂಲಪ್ರತಿ; ಆಟದ ಪ್ರತಿ; ಚಿತ್ರದ, ನಾಟಕದ – ಪ್ರತಿ; ಕಥಾಸಾರಾಂಶ, ಪಾತ್ರವಿವರ, ದೃಶ್ಯಸಂಯೋಜನ, ಸಂಭಾಷಣೆ, ಮೊದಲಾದವುಗಳನ್ನು ಒಳಗೊಂಡಿರುವ ಪ್ರತಿ.
  10. (ಲೆಕ್ಕಾಚಾರ, ಟಿಪ್ಪಣಿಗಳು, ಮೊದಲಾದವನ್ನು ಬರೆದಿಡಲು ಬಳಸುವ) ಪುಸ್ತಕ; ವಹಿ; ಬುಕ್ಕು.
  11. (ಬಹುವಚನದಲ್ಲಿ) (ಸಂಘಸಂಸ್ಥೆಗಳ) ದಾಖಲೆಪುಸ್ತಕ; ಕಡತ; ರೆಕಾರ್ಡುಗಳು.
  12. (ಬಹುವಚನದಲ್ಲಿ) ವರ್ತಕರ ಅಕೌಂಟ್‍ ಬುಕ್ಕು; ವಹಿವಾಟು ಪುಸ್ತಕ.
  13. (ಕುದುರೆ ಜೂಜಿನಲ್ಲಿ) ಬಾಜಿ; ಪಣ.
  14. (ಟಿಕೆಟ್ಟು, ಸ್ಟ್ಯಾಂಪು, ಬಟ್ಟೆಯ ತುಂಡು, ಚೆಕ್ಕು, ಮೊದಲಾದವುಗಳ) ಕಟ್ಟು; ಬುಕ್ಕು.
  15. (ಇಸ್ಪೀಟು ಪಟ್ಟಿನ) ಬುಕ್ಕು; ಒಟ್ಟು; ಒಂದು ತಂಡವೆಂದು ಪರಿಗಣಿಸಲಾಗುವ ಎಲೆಗಳು ಯಾ ಪಟ್ಟುಗಳ ಸಂಖ್ಯೆ.
ಪದಗುಚ್ಛ
  1. book of reference ಅವಲೋಕನ ಗ್ರಂಥ; ಯಾವುದೇ ವಿಷಯವನ್ನು ಕುರಿತು ಹೆಚ್ಚು ವಿವರಗಳನ್ನು ಪಡೆಯಲು, ಸಂಬಂಧಪಟ್ಟ ಭಾಗವನ್ನು ಮಾತ್ರ ನೋಡುವ ಗ್ರಂಥ.
  2. book of words = libretto.
  3. on the books ಸದಸ್ಯರ ಪಟ್ಟಿ ಮೊದಲಾದವುಗಳಲ್ಲಿ – ಸೇರಿಸಿದ, ದಾಖಲಾದ: take one’s name off the books ಸದಸ್ಯತ್ವ ಪಟ್ಟಿಯಿಂದ – ವಜಾ ಮಾಡು, ಹೆಸರು ಹೊಡೆ.
  4. the (good) book ಬೈಬಲ್‍: swear on the book ಬೈಬಲ್‍ ಮೇಲೆ ಪ್ರಮಾಣ ಮಾಡಿ ಹೇಳು. people of the Book ಯೆಹೂದ್ಯರು.
  5. without book
    1. (ಗ್ರಂಥದ) ಆಧಾರವಿಲ್ಲದೆ ಯಾ ಸಹಾಯವಿಲ್ಲದೆ; ನೆನಪಿನಿಂದ; ಜ್ಞಾಪಕದಿಂದ.
    2. ಆಧಾರವಿಲ್ಲದೆ; ಪ್ರಮಾಣವಿಲ್ಲದೆ; ನಿರಾಧಾರವಾಗಿ.
ನುಡಿಗಟ್ಟು
  1. bring to book
    1. ವಿಚಾರಣೆಗೆ, ತನಿಖೆಗೆ – ಗುರಿಮಾಡು, ವಿವರಣೆ ಕೇಳು.
    2. ಶಿಕ್ಷಿಸು.
  2. by the book
    1. ಪುಸ್ತಕದಲ್ಲಿರುವಂತೆ; ಸರಿಯಾದ ವಿವರಗಳನ್ನು ಕೊಟ್ಟು; ಸಪ್ರಮಾಣವಾಗಿ; ಸಾಧಾರವಾಗಿ.
    2. ನಿಯಮಾನುಸಾರ; ನಿರ್ದಿಷ್ಟ ರೀತಿಯಲ್ಲಿ; ಸರಿಯಾದ ವಿಧಾನದಲ್ಲಿ; ರೂಢಿಯ ಪ್ರಕಾರ.
  3. closed book ಮುಚ್ಚಿದ ಪುಸ್ತಕ; ವ್ಯಕ್ತಿಯ ಯಾ ವಿಷಯದ ಬಗ್ಗೆ ಅಸ್ಪಷ್ಟವಾದ, ಅರ್ಥವಾಗದ, ಮುಗಿದ – ಸಂಗತಿ ಮೊದಲಾದವು: the events of his youth are a closed book to us ಅವನ ಯೌವನಕಾಲದ ಘಟನೆಗಳ ಬಗ್ಗೆ ನಮಗೆ ಏನೂ ತಿಳಿಯದು.
  4. close the books ತಾಳೆ ಹೊಂದಿಸಿ – ಲೆಕ್ಕ ಮುಗಿಸು, ಚುಕ್ತ ಮಾಡು.
  5. in one’s bad or black books (ಒಬ್ಬನ) ಅಸಮಾಧಾನಕ್ಕೆ ಗುರಿಯಾಗಿ; ವಿಶ್ವಾಸ ಕಳೆದುಕೊಂಡು; ಅವಕೃಪೆಗೆ, ಅಪ್ರೀತಿಗೆ, ಅಸಂತೋಷಕ್ಕೆ – ಗುರಿಯಗಿ.
  6. in one’s book (ಒಬ್ಬನ) ಅಭಿಪ್ರಾಯದಲ್ಲಿ; (ಒಬ್ಬನು) ಕಂಡಂತೆ; ನೋಡಿದಂತೆ.
  7. in one’s good books (ಒಬ್ಬನ) ವಿಶ್ವಾಸಕ್ಕೆ, ಪ್ರೀತಿಗೆ, ಅಭಿಮಾನಕ್ಕೆ, ಕೃಪೆಗೆ, ಒಳ್ಳೆಯ ಅಭಿಪ್ರಾಯಕ್ಕೆ – ಪಾತ್ರನಾಗಿ.
  8. like a book
    1. ಪುಸ್ತಕದಂತೆ; ಗ್ರಾಂಥಿಕವಾಗಿ; ಸಾಂಪ್ರದಾಯಿಕ ಭಾಷೆಯಲ್ಲಿ; ಪುಸ್ತಕದ ಶೈಲಿಯಲ್ಲಿ; ವ್ಯಾಕರಣಬದ್ಧವಾಗಿ: speak or talk like a book ಗ್ರಾಂಥಿಕ ಭಾಷೆಯಲ್ಲಿ, ಪುಸ್ತಕದ ಶೈಲಿಯಲ್ಲಿ – ಮಾತನಾಡು.
    2. ಪೂರ್ತಿ; ಸಂಪೂರ್ಣವಾಗಿ: he knew the area like a book ಅವನಿಗೆ ಆ ಸ್ಥಳ ಸಂಪೂರ್ಣವಾಗಿ ಗೊತ್ತಿತ್ತು. she could read him like a book ಅವಳು ಅವನನ್ನು ಪೂರ್ತಿ ಅರ್ಥಮಾಡಿಕೊಂಡಿದ್ದಳು.
  9. make book (ವೃತ್ತಿಯಾಗಿ, ಕುದುರೆ ರೇಸು, ಮೊದಲಾದವುಗಳಲ್ಲಿ) ಬಾಜಿಕಟ್ಟು; ಬಾಜಿ ಒಪ್ಪು; ಪಣ ಹಿಡಿ.
  10. not in the book ಒಪ್ಪದ; ನಿರಾಕರಿಸಿದ; ತಿರಸ್ಕರಿಸಿದ; ಸಮ್ಮತಿಸದ; ಅಂಗೀಕರಿಸದ; ನಿಷೇಧಿಸಿದ.
  11. one for the book ಗಮನಾರ್ಹವಾದ; ಉಲ್ಲೇಖನೀಯವಾದ; ಸ್ಮರಣೀಯವಾದ.
  12. open book ತೆರೆದ ಪುಸ್ತಕ; ವ್ಯಕ್ತಿಯ ಯಾ ವಿಷಯದ ಬಗ್ಗೆ ಪ್ರಕಟವಾದ, ಅರ್ಥವಾಗುವ, ಸ್ಪಷ್ಟವಾದ – ಸಂಗತಿ, ಗುಣ, ಪರಿಸ್ಥಿತಿ, ಮೊದಲಾದವು: his mind is an open book to me ನನಗೆ ಅವನ ಅಭಿಪ್ರಾಯ ಸ್ಪಷ್ಟವಾಗಿ ಅರ್ಥವಾಗುತ್ತದೆ.
  13. suit one’s book (ಒಬ್ಬನಿಗೆ, ಒಬ್ಬನ ಹಿತಕ್ಕೆ) ತಕ್ಕುದಾಗಿರು; ಅನುಕೂಲವಾಗಿರು; ಸಹಾಯಕವಾಗಿರು: won’t suit my book ನನಗೆ ಅನುಕೂಲವಾಗಿಲ್ಲ.
  14. take a leaf out of one’s book ಒಬ್ಬನನ್ನು ಅನುಕರಿಸು; ಒಬ್ಬನ ಮೇಲ್ಪಂಕ್ತಿಯನ್ನು ಅನುಸರಿಸು; ಒಬ್ಬನು ನಡೆದಂತೆ ನಡೆ, ಮಾಡಿದಂತೆ ಮಾಡು.
  15. throw the book at
    1. (ಅಪರಾಧಿಗೆ ಕಾಯಿದೆಯಲ್ಲಿ ಹೇಳಿರುವ) ಪರಮಾವಧಿ ದಂಡನೆ ವಿಧಿಸು.
    2. ಉಗ್ರವಾಗಿ ನಿಂದಿಸು ಯಾ ದಂಡಿಸು.
    3. ಸಾಧ್ಯವಾದ ಎಲ್ಲ ಆಪಾದನೆಗಳನ್ನೂ ಹೊರಿಸು.
See also 1book
2book ಬುಕ್‍
ಸಕರ್ಮಕ ಕ್ರಿಯಾಪದ
  1. ಪುಸ್ತಕದಲ್ಲಿ ಯಾ ಪಟ್ಟಿಯಲ್ಲಿ – ಸೇರಿಸು, ಬರೆ, ದಾಖಲು ಮಾಡು.
  2. (ವಸತಿ, ಸೀಟು, ಮೊದಲಾದವನ್ನು) ಮುಂದಾಗಿ ಗೊತ್ತು ಮಾಡು.
  3. (ಅತಿಥಿ, ಬೆಂಬಲಿಗ, ಮೊದಲಾದವರನ್ನು ಯಾವುದೇ ಸಂದರ್ಭಕ್ಕಾಗಿ) ಗೊತ್ತು ಮಾಡಿಕೊ; ನಿಷ್ಕರ್ಷೆ ಮಾಡಿಕೊ.
  4. (ಜಾಗ ಗೊತ್ತು ಮಾಡಿರುವವನು, ಗುಮಾನಿಯಿರುವವನು, ಮೊದಲಾದವರ) ಹೆಸರು – ನಮೂದಿಸು, ಬರೆ.
  5. (ಪ್ರಯಾಣಕ್ಕೆ) ಟಿಕೆಟ್‍ ಕೊಡು.
  6. (ರವಾನೆಯಾಗುವ) ಸರಕುಗಳ ವಿಳಾಸ ಬರೆದುಕೊ; ಸರಕುಗಳನ್ನು ದಾಖಲಿಸು; ಸರಕುಗಳನ್ನು ಬುಕ್‍ ಮಾಡು.
  7. (ಮುಖ್ಯವಾಗಿ ಪೊಲೀಸು ದಾಖಲೆಯಲ್ಲಿ) ಆರೋಪ ದಾಖಲಿಸು; ಆರೋಪಗಳನ್ನು ಬರೆ.
  8. (ಭೂತಕೃದಂತದಲ್ಲಿ, ಅಶಿಷ್ಟ) ಸಿಕ್ಕಿ ಹಾಕಿಕೊ: I am booked ನಾನು ಸಿಕ್ಕಿಹಾಕಿಕೊಂಡೆ.
ಅಕರ್ಮಕ ಕ್ರಿಯಾಪದ

ಪ್ರಯಾಣ ಮೊದಲಾದವುಗಳಿಗೆ ಟಿಕೆಟ್‍ – ಪಡೆ, ಕೊಂಡುಕೊ.

ಪದಗುಚ್ಛ

book in ಹೋಟೆಲ್‍ ಮೊದಲಾದವುಗಳಲ್ಲಿ ನೋಂದಾಯಿಸಿಕೊ; ಹೋಟೆಲ್‍ನಲ್ಲಿ ತನ್ನ ಹೆಸರು, ಆಗಮನ, ನಿರ್ಗಮನಗಳನ್ನು – ಬರೆ, ದಾಖಲಿಸು.