See also 2blue  3blue  4blue
1blue ಬ್ಲೂ
ಗುಣವಾಚಕ
  1. ನೀಲ; ನೀಲಿಯ; ನೀಲಬಣ್ಣದ:
    1. ವರ್ಣಪಟಲದ ನೇರಳೆ ಮತ್ತು ಹಸಿರುಗಳ ನಡುವೆ ಬರುವ ವರ್ಣದ.
    2. ಶುಭ್ರ ಆಕಾಶದಂತೆ ಯಾ ಆಳವಾದ ಸಮುದ್ರದಂತೆ ಕಡುನೀಲಿಯ.
    3. ಬೆಳುದಿಂಗಳಂತೆ ಧವಳ ನೀಲಿಮೆಯ.
    4. ಹೊಗೆ, ದೂರದ ಬೆಟ್ಟ, ಹಳೆಯ ಗಾಯಗಳಂತೆ ಶ್ಯಾಮಲವಾದ.
  2. ನೀಲಿಬಟ್ಟೆ ಧರಿಸಿದ: Foot Guards Blue ಪದಾತಿದಳದ ನೀಲಿ ಸಮವಸ್ತ್ರ.
  3. (ಬ್ರಿಟಿಷ್‍ ಪ್ರಯೋಗ) ಒಂದು ನಿರ್ದಿಷ್ಟ (ಸಾಮಾನ್ಯವಾಗಿ ಟೋರಿ ಯಾ ಕನ್ಸರ್ವಟಿವ್‍) ರಾಜಕೀಯ ಪಕ್ಷದ.
  4. (ಪ್ರಾಚೀನ ಪ್ರಯೋಗ) ಪಂಡಿತೆಯಾದ; ವಿದುಷಿಯಾದ.
  5. (ಮಾತು, ಚಲನಚಿತ್ರ ಮೊದಲಾದವುಗಳ ವಿಷಯದಲ್ಲಿ) ಹೊಲಸಾದ; ಅಸಭ್ಯ; ಅಶ್ಲೀಲ: blue films ಅಶ್ಲೀಲ ಚಲನಚಿತ್ರಗಳು.
  6. ತೀರ ಕಟ್ಟುನಿಟ್ಟಾದ; ಅತಿ ನೀತಿ ನಿಷ್ಠೆಯ; ವಿಪರೀತ ಆಚಾರದ: blue laws ತೀರ ಕಟ್ಟುನಿಟ್ಟಾದ ಕಾನೂನುಗಳು.
  7. ಬೇಜಾರಾದ: ಮನಗುಂದಿದ; ಖಿನ್ನ; ವಿಷಣ್ಣ; ನಿರುತ್ಸಾಹಗೊಂಡ: she was blue about not being invited to the dance ನೃತ್ಯ ಕಾರ್ಯಕ್ರಮಕ್ಕೆ ಕರೆಯದೆ ಇದ್ದುದರಿಂದ ಅವಳು ಬೇಜಾರಾಗಿದ್ದಳು.
  8. (ಪರಿಸ್ಥಿತಿ ಮೊದಲಾದವುಗಳ ವಿಷಯದಲ್ಲಿ) ಹತಾಶ; ನಿರಾಶಾದಾಯಕ; ನಿರುತ್ಸಾಹಗೊಳಿಸುವ: a blue outlook ನಿರಾಶಾದಾಯಕ ಪರಿಸ್ಥಿತಿ.
  9. (ಸಂಗೀತ) ಬ್ಲೂಸ್‍ನ; ಅಮೆರಿಕದ ಒಂದು ಬಗೆಯ ನೀಗ್ರೊ ಸಂಗೀತದ.
  10. (ಚಳಿ, ಹೆದರಿಕೆ, ಕೋಪ, ಮೊದಲಾದವುಗಳಿಂದ) ನೀಲಿಗಟ್ಟಿದ ಚರ್ಮವುಳ್ಳ; ಚರ್ಮ ನೀಲಿಗಟ್ಟಿದ; ನೀಲಿ ಮೈಯಾದ.
ನುಡಿಗಟ್ಟು
  1. blue funk ಕಡುದಿಗಿಲು; ಅತಿ ಗಾಬರಿ.
  2. drink till all’s blue ಅಮಲೇರಿ ಕಣ್ಣು ಕತ್ತಲಾಗುವಷ್ಟು ಕುಡಿ.
  3. look blue (ಆಡುಮಾತು)
    1. (ವ್ಯಕ್ತಿಗಳ ವಿಷಯದಲ್ಲಿ) ವಿಷಣ್ಣನಾಗಿ; ಉತ್ಸಾಹರಹಿತನಾಗಿ, ಖಿನ್ನನಾಗಿ – ಕಾಣು; ಎದೆಗಟ್ಟಂತೆ, ಧೈರ್ಯಗೆಟ್ಟಂತೆ, ಅಂಜಿದಂತೆ – ಕಾಣು.
    2. (ಪರಿಸ್ಥಿತಿಗಳ ವಿಷಯದಲ್ಲಿ) ನಿರಾಶಾಜನಕವಾಗಿರು; ಶೂನ್ಯವಾಗಿ ಕಾಣು: things looked blue ಎಲ್ಲವೂ ಶೂನ್ಯವಾಗಿ ಕಂಡವು.
  4. once in a blue moon ಅಮಾವಾಸ್ಯೆಗೊಮ್ಮೆ ಪೂರ್ಣಿಮೆಗೊಮ್ಮೆ; ಅಪರೂಪವಾಗಿ; ವಿರಳವಾಗಿ.
  5. true blue ನಚ್ಚಿನ; ನಂಬಿಕೆಗೆ – ಅರ್ಹವಾದ, ಪಾತ್ರವಾದ; ನಿಷ್ಠಾವಂತ.
See also 1blue  3blue  4blue
2blue ಬ್ಲೂ
ನಾಮವಾಚಕ
  1. ನೀಲಿ; ನೀಲ; ವರ್ಣಪಟಲದಲ್ಲಿ ಹಸಿರು ಮತ್ತು ನೇರಳೆ ಬಣ್ಣಗಳ ನಡುವಣ ಬಣ್ಣ.
  2. ನೀಲಿರಂಗು; ನೀಲಿ ವರ್ಣದ್ರವ್ಯ.
  3. ನೀಲಿ; ಚಲುವೆ ಮಾಡಲು ಬಳಸುವ ನೀಲಿ ಪುಡಿ.
  4. ನೀಲಿ – ಬಟ್ಟೆ, ಉಡುಪು, ಮೊದಲಾದವು: dressed in blue ನೀಲಿ ಉಡುಪು ಧರಿಸಿ.
  5. (ಬ್ರಿಟಿಷ್‍ ಪ್ರಯೋಗ) (ಬ್ಲೂಸ್‍ ಎಂಬ ರಾಜಕೀಯ ಪಕ್ಷದ ಸಂಕೇತವಾದ) ನೀಲಿ ಬಣ್ಣ.
  6. (ಬ್ರಿಟಿಷ್‍ ಪ್ರಯೋಗ) ಬ್ಲೂಸ್‍ ಪಕ್ಷದ (ಸಾಮಾನ್ಯವಾಗಿ ಕನ್ಸರ್ವಟಿವ್‍) ಸದಸ್ಯ.
  7. (ಬ್ರಿಟಿಷ್‍ ಪ್ರಯೋಗ) ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳನ್ನು ವ್ಯಾಯಾಮ, ಕ್ರೀಡೆಗಳು, ಮೊದಲಾದವುಗಳಲ್ಲಿ ಪ್ರತಿನಿಧಿಸುವ ಕ್ರೀಡಾಪಟು.
  8. ಪಂಡಿತೆ; ವಿದುಶಿ.
  9. (ಬಹುವಚನದಲ್ಲಿ) ಬ್ಲೂಸ್‍; (ಸಾಮಾನ್ಯವಾಗಿ ವ್ಯಥೆಯನ್ನು ಸೂಚಿಸುವ) ನೀಗ್ರೋ ಮೂಲದ ಒಂದು ಬಗೆಯ ಹಾಡು.
  10. ನೀಲಿ (ಬಣ್ಣದ) ಚಿಟ್ಟೆ.
  11. (ಸ್ನೂಕರ್‍ ಮೊದಲಾದ ಆಟಗಳಲ್ಲಿ) ನೀಲಿಚೆಂಡು.
  12. (ಆಸ್ಟ್ರೇಲಿಯ, ಅಶಿಷ್ಟ) ವಾಗ್ವಾದ; ವಾಕ್ಕಲಹ; ಮಾತಿನ ಜಗಳ.
  13. (ಬಹುವಚನದಲ್ಲಿ) ಉಮ್ಮಳ; ವಿಷಣ್ಣತೆ; ಖಿನ್ನತೆ; ಮನೋಗ್ಲಾನಿ.
ಪದಗುಚ್ಛ
  1. Cambridge blue (ಪಂದ್ಯಗಳಲ್ಲಿ) ಕೇಂಬ್ರಿಜ್‍ ಬ್ಲೂ; ಕೇಂಬ್ರಿಜ್‍ ವಿಶ್ವವಿದ್ಯಾನಿಲಯದ ಸಂಕೇತವಾದ ತಿಳಿನೀಲಿಬಣ್ಣ.
  2. dark blues ಡಾರ್ಕ್‍ ಬ್ಲೂಸ್‍; ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದ ಕ್ರೀಡಾದಳ.
  3. light blues ಲೈಟ್‍ ಬ್ಲೂಸ್‍; ಕೇಂಬ್ರಿ ವಿಶ್ವವಿದ್ಯಾನಿಲಯದ ಕ್ರೀಡಾದಳ.
  4. Oxford blue (ದೋಣಿ ಮೊದಲಾದ ಪಂದ್ಯಗಳಲ್ಲಿ) ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದ ಸಂಕೇತವಾದ ಕಡು ನೀಲಿ ಬಣ್ಣ.
  5. the blue
    1. ಆಕಾಶ; ಬಾನು.
    2. ಕಡಲು; ಸಮುದ್ರ.
  6. the Blues (ಬ್ರಿಟಿಷ್‍ ಪ್ರಯೋಗ) (ಇಂಗ್ಲಂಡಿನ) ರಾಜಾಶ್ವದಳ; ಅರಮನೆ ಕುದುರೆದಳ.
  7. the Blues or Blues trot ಹಾಕ್ಸ್‍ಟ್ರಾಟ್‍ ತರಹದ ನೃತ್ಯ.
ನುಡಿಗಟ್ಟು
  1. bolt from the blue (ಬರ) ಸಿಡಿಲು; ಅನಿರೀಕ್ಷಿತ ಆಘಾತ; ಹಠಾತ್‍ ವಿಪತ್ತು.
  2. out of the blue ಇದ್ದಕ್ಕಿದ್ದಂತೆ; ಅನಿರೀಕ್ಷಿತವಾಗಿ; ಆಕಸ್ಮಿಕವಾಗಿ; ಹಠಾತ್ತಾಗಿ.
  3. win or get one’s blue ಸ್ಪರ್ಧೆಗಳಲ್ಲಿ ಆಕ್ಸ್‍ಹರ್ಡ್‍ ಯಾ ಕೇಂಬ್ರಿಜ್‍ ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ಆಯ್ಕೆಯಾಗು.
See also 1blue  2blue  4blue
3blue ಬ್ಲೂ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ blued, ವರ್ತಮಾನ ಕೃದಂತ blueing ಯಾ bluing ಉಚ್ಚಾರಣೆ ಬ್ಲೂಇಂಗ್‍).
  1. ನೀಲಿ ಮಾಡು; ನೀಲಗೊಳಿಸು.
  2. (ಬಟ್ಟೆಗೆ) ನೀಲಿ ಹಾಕು.
See also 1blue  2blue  3blue
4blue ಬ್ಲೂ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ blued, ವರ್ತಮಾನ ಕೃದಂತ blueing ಯಾ bluing ಉಚ್ಚಾರಣೆ ಬ್ಲೂಇಂಗ್‍).

(ಅಶಿಷ್ಟ) (ಹಣವನ್ನು) ದುಂದು ಮಾಡು; ಪೋಲು ಮಾಡು; ದುಂದುವೆಚ್ಚ ಮಾಡು.