aureola ಆರೀಅಲ
ನಾಮವಾಚಕ
  1. (ಮತಧರ್ಮಕ್ಕಾಗಿ ಸತ್ತವ, ಚಿರಕನ್ಯೆ, ಸೈತಾನನನ್ನು ಗೆದ್ದ ಪಂಡಿತ – ಇವರಿಗೆ ಮೇಲಣ ಲೋಕದಲ್ಲಿ ಸಿಕ್ಕುತ್ತದೆಂದು ನಂಬಲಾದ) ದಿವ್ಯ ಕಿರೀಟ.
  2. (ಪ್ರಾಚೀನ ಚಿತ್ರಗಳಲ್ಲಿ ತಲೆಯ ಸುತ್ತ ಇದ್ದ) ಹೇಮ ಪ್ರಭಾವಳಿ; ಕನಕ ಮಂಡಲ.
  3. (ದೇವತಾ ವ್ಯಕ್ತಿಗಳ ಚಿತ್ರಗಳಲ್ಲಿ ಅವುಗಳ ತಲೆಗಳ ಯಾ ಶರೀರಗಳ ಸುತ್ತಲಿರುವ) ಬೆಳಕು; ಪ್ರಭಾಮಂಡಲ; ತೇಜೋಮಂಡಲ; ಪ್ರಭಾವಳಿ. Figure: aureola
  4. (ಖಗೋಳ ವಿಜ್ಞಾನ) ಪರಿವೇಷ; ಸೂರ್ಯನ ಯಾ ಚಂದ್ರನ ಸುತ್ತ ಕಾಣಿಸುವ ಪ್ರಭೆಯ ಮಂಡಲ.