attach ಅಟ್ಯಾಚ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತುವನ್ನು ಇನ್ನೊಂದಕ್ಕೆ) ಕೂಡಿಸು; ಸೇರಿಸು; ಜೋಡಿಸು; ಕಟ್ಟು; ಅಂಟಿಸು; ಬಿಗಿ.
  2. (ವ್ಯಕ್ತಿ, ಸಂಘ, ಪ್ರವಾಸ, ಮೊದಲಾದವುಗಳೊಡನೆ) ಜೊತೆಗೂಡು; ಸೇರಿಕೊ: attach yourself to a likeminded group ಸಮಾನ ಮನಸ್ಸಿನವರ ಜತೆ ಸೇರಿಕೊ.
  3. ಒಲಿಸಿಕೊ; ಗೌರವಾದರ ಗಳಿಸು.
  4. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಹಚ್ಚಿಕೊ; ಆಸಕ್ತನಾಗು; ಅನುರಕ್ತನಾಗು; ಪ್ರೀತಿಸು; ಸ್ನೇಹ, ಆಕರ್ಷಣೆ, ಮೊದಲಾದವುಗಳಿಂದ (ಒಬ್ಬನಿಗೆ ಯಾ ಒಂದಕ್ಕೆ) ಕಟ್ಟಿ ಹಾಕಿಕೊ: he is deeply attached to her ಅವನು ಅವಳನ್ನು ತುಂಬಾ ಹಚ್ಚಿಕೊಂಡಿದ್ದಾನೆ.
  5. ಒಲಿಸಿಕೊ; ಅನುರಕ್ತನನ್ನಾಗಿಸಿಕೊ.
  6. ನೇಮಿಸು; ವಿಶೇಷ ಯಾ ತಾತ್ಕಾಲಿಕ ಕೆಲಸಗಳಿಗಾಗಿ ನೇಮಕ ಮಾಡು.
  7. (ಅಮೂರ್ತವಸ್ತು, ಋಣ, ಹೆಸರು, ಮೊದಲಾದವನ್ನು) ಸೇರಿಸು; ಹಚ್ಚು: attach the guilt of murder ಕೊಲೆಯ ಅಪರಾಧವನ್ನು ಹಚ್ಚು.
  8. (ಗುಣ, ಪ್ರಾಮುಖ್ಯ, ಮೊದಲಾದವನ್ನು) ಕೊಡು; ಹತ್ತಿಸು; ಆರೋಪಿಸು; ಅನ್ವಯಿಸು: why attach a special significance to his absence? ಅವನ ಗೈರುಹಾಜರಿಗೆ ಮಹತ್ವವನ್ನು ಕೊಡುವುದೇಕೆ?
  9. (ನ್ಯಾಯಶಾಸ್ತ್ರ) (ಕಾನೂನು ಪ್ರಕಾರ) ಹಿಡಿ; ಬಂಧಿಸು; ದಸ್ತಗಿರಿ ಮಾಡು; ವಶಪಡಿಸಿಕೊ; ಜಫ್ತಿ ಮಾಡು.
ಅಕರ್ಮಕ ಕ್ರಿಯಾಪದ
  1. ಅಂಟು; ಹತ್ತು; ತಗಲು: no blame attaches to you ನಿನಗೆ ಇದರ ದೋಷ ತಗಲುವುದಿಲ್ಲ.
  2. ಸೇರಿರು; ಸಂಬಂಧಿಸಿರು.