See also 2astringent
1astringent ಅಸ್ಟ್ರಿಂಜನ್ಟ್‍
ಗುಣವಾಚಕ
  1. ಕಟ್ಟುವ; ಬಂಧಿಸುವ.
  2. ಸ್ರಾವರೋಧಕ; ರಕ್ತ, ಕೀವು, ಮೊದಲಾದವುಗಳ ಸೋರಿಕೆಯನ್ನು ತಡೆಯುವ, ನಿಲ್ಲಿಸುವ.
  3. ಕುಗ್ಗಿಸುವ; ಮುದುಡಿಸುವ.
  4. ಒಗರು; ಒಗಚು; ಬಾಯಿ ಸುರುಟಿಸುವ: astringent fruits and wines ಒಗರು ಹಣ್ಣುಗಳು, ಮದ್ಯಗಳು.
  5. ಬಿರುಸಾದ; ಜೋರಿನ; ಖಾರವಾದ; ಕಠಿನ: his own writing has an astringent quality ಆತನ ಬರಹವು ಖಾರವಾದ ಗುಣವನ್ನು ಹೊಂದಿದೆ.
  6. (ಶೈಲಿ, ಮಾತು, ಬುದ್ಧಿ, ಮೊದಲಾದವುಗಳ ವಿಷಯದಲ್ಲಿ) ಚುರುಚುರುಗುಟ್ಟುವ; ಚುರುಕು ಮುಟ್ಟಿಸುವ; ಹರಿತ; ತೀಕ್ಷ್ಣ.
  7. ಖಂಡತುಂಡ; ನಿಷ್ಠುರದ ಖಡಾಖಂಡಿತದ: made enemies by his honesty ತನ್ನ ನಿಷ್ಠುರ ಪ್ರಾಮಾಣಿಕತೆಯಿಂದ ಆತ ಬಹುಮಂದಿಯನ್ನು ಹಗೆಗಳಾಗಿ ಮಾಡಿಕೊಂಡ.
See also 1astringent
2astringent ಅಸ್ಟ್ರಿಂಜನ್ಟ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಸಂಕೋಚಕ; ದೇಹದ ಅಂಗಾಂಶಗಳನ್ನು ಯಾ ನಾಳಗಳನ್ನು ಕುಗ್ಗಿಸುವ ಪದಾರ್ಥ.
  2. (ವೈದ್ಯಶಾಸ್ತ್ರ) ಸ್ರಾವರೋಧಕ; ರಕ್ತ, ಕೀವು, ಮೊದಲಾದವುಗಳು ಸೋರುವುದನ್ನು ತಡೆಗಟ್ಟುವ ಪದಾರ್ಥ.