assimilation ಅಸಿಮಿಲೇಷನ್‍
ನಾಮವಾಚಕ
  1. ಮೈಗೂಡಿಸಿಕೊಳ್ಳುವಿಕೆ; ಸ್ವಾಂಗೀಕರಣ; ಆತ್ಮೀಕರಣ; ಆತ್ಮಸಾತ್ಕರಣ.
  2. ಮೈಗೂಡುವಿಕೆ; ತದ್ಗತ ಸ್ಥಿತಿ; ಮೈಗೂಡಿದ ಸ್ಥಿತಿ.
  3. (ಆಹಾರಾದಿಗಳು ಜೀರ್ಣವಾಗಿ) ಮೈಗೂಡಿಸಿಕೊಳ್ಳುವಿಕೆ; ಮೈ ಹತ್ತುವಿಕೆ; ಅರಗಿಸಿಕೊಳ್ಳುವಿಕೆ; ಪರಿಪಾಚನ.
  4. ಹೊಂದಾಣಿಕೆ; ಹೊಂದಿಸುವಿಕೆ.
  5. ಹೋಲಿಕೆ; ಸಾದೃಶ್ಯ.
  6. ಸಮೀಕರಣ:
    1. ಅಲ್ಪಸಂಖ್ಯಾತವರ್ಗದ ಸಂಸ್ಕೃತಿ ಬಹುಸಂಖ್ಯಾತ ವರ್ಗದ ಸಂಸ್ಕೃತಿಯಲ್ಲಿ ಲೀನವಾಗುವುದು, ಬೆರೆತು ಹೋಗುವುದು.
    2. (ಧ್ವನಿವಿಜ್ಞಾನ) ಪಕ್ಕದ ಧ್ವನಿಯ ಪ್ರಭಾವದಿಂದ ಧ್ವನಿಯೊಂದು ಅದರಂತಾಗುವುದು: cupboard ನಲ್ಲಿ p ಯು b ಯ ಉಚ್ಚಾರಣೆ ಪಡೆಯುವುದು.