See also 2assign
1assign ಅಸೈನ್‍
ಸಕರ್ಮಕ ಕ್ರಿಯಾಪದ
  1. (ಪಾಲನ್ನು, ಭಾಗವನ್ನು) ಹಂಚಿಕೊಡು; ನಿಗದಿ ಮಾಡಿಕೊಡು.
  2. (ಮುಖ್ಯವಾಗಿ ಸ್ವಂತ ಸ್ವತ್ತನ್ನು ಯಾ ಅದರ ಅಧಿಕಾರವನ್ನು) ವಹಿಸಿಕೊಡು; ಬಿಟ್ಟುಕೊಡು; ಹಸ್ತಾಂತರಿಸು; ವರ್ಗಾಯಿಸು.
  3. (ಸ್ಥಾನ ಮೊದಲಾದವನ್ನು) ಗೊತ್ತು ಮಾಡು; ನಿಗದಿಪಡಿಸು; ನಿಷ್ಕರ್ಷಿಸು; ನಿರ್ಧರಿಸು.
  4. (ಕೆಲಸಕ್ಕಾಗಿ) ನೇಮಿಸು; ಗೊತ್ತುಮಾಡು: assign him to guard duty ಕಾಯುವ ಕೆಲಸಕ್ಕೆ ಅವನನ್ನು ನೇಮಿಸು.
  5. (ಕೆಲಸ) ನೀಡು; ವಹಿಸು; ಒಪ್ಪಿಸು: assigned him homework ಅವನಿಗೆ ಮನೆ ಕೆಲಸ ನೀಡಿದ.
  6. (ಯಾವುದನ್ನೇ) ಗೊತ್ತು ಮಾಡು; ನಿಗದಿಮಾಡು.
  7. (ಕರ್ತೃತ್ವವನ್ನು) ಆರೋಪಿಸು.
  8. (ಕಾರಣವನ್ನು) ಕೊಡು; ನೀಡು; ತಿಳಿಸು.
  9. (ಯಾವುದೇ ವ್ಯಕ್ತಿಗಾಗಿ ಯಾ ಉದ್ೇಶಕ್ಕಾಗಿ) ಪ್ರತ್ಯೇಕವಾಗಿಡು; ತೆಗೆದಿಡು; ಮೀಸಲಾಗಿಡು.
  10. ಕಾಲನಿರ್ದೇಶನ ಮಾಡು; ಕಾಲ ನಿರ್ದೇಶಿಸು; (ಘಟನೆ, ವ್ಯಕ್ತಿ, ಗ್ರಂಥ ಮೊದಲಾದವನ್ನು ಒಂದು ಕಾಲಕ್ಕೆ) ಸೇರಿದ್ದೆಂದು-ಸೂಚಿಸು, ತಿಳಿಸು, ಹೇಳು: assigned to the ninth century ಒಂಬತ್ತನೆ ಶತಮಾನದ್ದೆಂದು ಹೇಳಲಾಗಿದೆ. 11. ಮೂಲನಿರ್ದೇಶಿಸು; ಮೂಲವನ್ನು ತಿಳಿಸು.
See also 1assign
2assign ಅಸೈನ್‍
ನಾಮವಾಚಕ

ವರ್ಗಾಯಿತ; ಹಸ್ತಾಂತರಿತ; ಕಾನೂನುಬದ್ಧವಾಗಿ ಆಸ್ತಿ, ಹಕ್ಕು, ಮೊದಲಾದವು ಯಾರಿಗೆ ವರ್ಗಾಯಿಸಲ್ಪಟ್ಟಿದೆಯೋ ಅವನು.