assail ಅಸೇಲ್‍
ಸಕರ್ಮಕ ಕ್ರಿಯಾಪದ
  1. ಎರಗು; ಕೈಮಾಡು; ಮೇಲೆಬೀಳು; ದಾಳಿಯಿಡು; ಆಕ್ರಮಣ ಮಾಡು (ರೂಪಕವಾಗಿ ಸಹ).
  2. ದಬಾಯಿಸು; (ಪ್ರಶ್ನೆ ಮೊದಲಾದವುಗಳಿಂದ) ವಾಗ್ದಾಳಿ ಮಾಡು.
  3. (ಕೆಲಸವನ್ನು) ಪಟ್ಟುಹಿಡಿದು ಪ್ರಾರಂಭಿಸು; ಹಟ ತೊಟ್ಟು ಶುರು ಮಾಡು.
  4. ಬಲವಾಗಿ – ಬಡಿ, ಹೊಡಿ, ಅಪ್ಪಳಿಸು; ಆಘಾತಿಸು: a loud noise assailed my ears ಭಾರಿ ಶಬ್ದ ನನ್ನ ಕಿವಿಗೆ ಬಡಿಯಿತು. mind assailed by conflicting arguments ವಿರುದ್ಧ ವಾದಗಳ ಆಘಾತಕ್ಕೆ ಸಿಕ್ಕಿದ ಮನಸ್ಸು.