See also 2aspect
1aspect ಆಸ್ಪೆಕ್ಟ್‍
ನಾಮವಾಚಕ
  1. (ಒಂದು ನಿರ್ದಿಷ್ಟ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದರದೇ) ನೋಟ; ತೋರ್ಕೆ; ದರ್ಶನ; ಆಕಾರ; ರೂಪ; ದೃಶ್ಯ.
  2. ಮುಖ; ಮುಖಭಾವ; ಮುಖಮುದ್ರೆ.
  3. ಅಭಿಮುಖತೆ; ಒಂದು ದಿಕ್ಕಿಗೆ ತಿರುಗಿಕೊಂಡಿರುವಿಕೆ: the house has a southern aspect ಮನೆ ದಕ್ಷಿಣಾಭಿಮುಖವಾಗಿದೆ.
  4. (ಹಾಗೆ) ಅಭಿಮುಖವಾಗಿರುವ ಪಾರ್ಶ; ತಿರುಗಿರುವ – ಪಕ್ಕ, ಮುಖ.
  5. (ಯಾವುದಾದರೂ ಸಮಸ್ಯೆ, ವಿಷಯ, ಘಟನೆ, ಮೊದಲಾದವುಗಳ) ಭಾಗ; ಅಂಶ; ಮುಖ; ಭಾವ; ಅರ್ಥ: the aspect of the problem that interests me most ನನಗೆ ಆಸಕ್ತಿ ಇರುವ ಆ ಸಮಸ್ಯೆಯ ಅಂಶ, ಮುಖ.
  6. (ಜ್ಯೋತಿಷ) ಗ್ರಹಸ್ಥಿತಿ; ಗ್ರಹಗಳು ಮೊದಲಾದವು ಇರುವ ಸ್ಥಾನ.
  7. (ಜ್ಯೋತಿಷ) (ಗ್ರಹಗಳು ಒಂದರ ಮೇಲೊಂದು ಬೀರುವ) ನೋಟ; ದೃಷ್ಟಿ: evil aspect of planets ಗ್ರಹಗಳ ಕ್ರೂರ ದೃಷ್ಟಿ.
  8. (ವ್ಯಾಕರಣ) (ರಷ್ಯನ್‍ ಮೊದಲಾದ ಸ್ಲಾವಿಕ್‍ ಭಾಷೆಗಳಲ್ಲಿ) ಒಂದು ಕ್ರಿಯೆ ಯಾ ಸ್ಥಿತಿಯ ಪ್ರಾರಂಭ, ಅವಧಿ ಯಾ ಮುಕ್ತಾಯಗಳನ್ನು ಸೂಚಿಸುವ ಧಾತು ಯಾ ಧಾತುರೂಪ, ಉದಾಹರಣೆಗೆಇಂಗ್ಲಿಷ್‍ನ I have gone ಎಂಬಲ್ಲಿ have.
  9. (ಯಾವುದೇ ಸಸ್ಯಜಾತಿಯು ನಿರ್ದಿಷ್ಟ ಋತುವಿನಲ್ಲಿ ತಾಳುವ) ಲಕ್ಷಣ; ತೋರ್ಕೆ: spring aspect ವಸಂತ ಲಕ್ಷಣ.
  10. ದೃಷ್ಟಿ; ದೃಷ್ಟಿಕೋನ; ವಸ್ತುಗಳನ್ನು ಯಾ ವಿಷಯಗಳನ್ನು ನೋಡುವ ರೀತಿ.
  11. ಅವಸ್ಥೆ; ಸ್ಥಿತಿ; ದೆಶೆ.
  12. ಮುಖ; (ಮುಖ್ಯವಾಗಿ ಮನಸ್ಸಿಗೆ) ಕಾಣಿಸಿಕೊಳ್ಳುವ ರೀತಿ, ರೂಪ, ಆಕಾರ: the different aspects of Buddhism ಬಉದ್ಧಧರ್ಮದ ವಿವಿಧ ಮುಖಗಳು.
See also 1aspect
2aspect ಆಸ್ಪೆಕ್ಟ್‍
ಸಕರ್ಮಕ ಕ್ರಿಯಾಪದ

(ಜ್ಯೋತಿಷ) (ಗ್ರಹ ಮೊದಲಾದವುಗಳ ವಿಷಯದಲ್ಲಿ) (ವ್ಯಕ್ತಿ, ಮನೆ ಯಾ ಇನ್ನೊಂದು ಗ್ರಹದ ಮೇಲೆ) ಕಣ್ಣು ಹಾಕು; ದೃಷ್ಟಿ ಬೀರು: when badly aspected by Saturn ಶನಿ ದೃಷ್ಟಿ ಬೀರಿದಾಗ; ಶನಿಯ ವಕ್ರದೃಷ್ಟಿ ಬಿದ್ದಾಗ.