ascension ಅಸೆನ್ಷನ್‍
ನಾಮವಾಚಕ
  1. ಏರಿಕೆ; ಆರೋಹಣ.
  2. (Ascension) ಕ್ರಿಸ್ತನ ಸ್ವರ್ಗಾರೋಹಣ; ಪುನರುತ್ಥಾನದ ನಲವತ್ತು ದಿನಗಳ ಮೇಲೆ ಕ್ರಿಸ್ತ ಸ್ವರ್ಗಕ್ಕೇರಿದುದು.
  3. (ಖಗೋಳ ವಿಜ್ಞಾನ) (ಆಕಾಶಕಾಯದ) ಉದಯ.
ಪದಗುಚ್ಛ

right ascension ಖಗೋಳ ರೇಖಾಂಶ; ವಿಷುವಾಂಶ; ಲಂಕೋದಯಾಂತರ; ಯಾವುದೇ ಬಿಂದುವಿನ ಮೂಲಕ ಹಾದು ಹೋಗುವ ಹೋರಾವೃತ್ತ (ಖಗೋಳ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತ)ವೂ ಖಮಧ್ಯ ರೇಖೆಯೂ ಕತ್ತರಿಸುವ ಬಿಂದುವು ಮೇಷ ಸಂಕ್ರಾಂತಿ ಬಿಂದುವಿನಿಂದ ಪೂರ್ವಕ್ಕೆ ಎಷ್ಟು ದೂರವಿದೆಯೋ ಆ ದೂರ.