See also 2arrow
1arrow ಆರೋ
ನಾಮವಾಚಕ
  1. ಅಂಬು; ಕಣೆ; ಬಾಣ; ಶರ.
  2. ಅಂಬಿನಾಕಾರದ ಯಾವುದೇ ವಸ್ತು.
  3. ಅಂಬುಗುರುತು; ಬಾಣದ ಸಂಕೇತ; ಶರಚಿಹ್ನೆ; ನಕ್ಷೆ, ರಸ್ತೆ, ಮೊದಲಾದವುಗಳಲ್ಲಿ ದಿಕ್ಕು ಯಾ ಸ್ಥಾನವನ್ನು ಸೂಚಿಸಲು ಬಳಸುವ ಬಾಣದ ಗುರುತು ($\rightarrow$).
  4. (ಗಿಡ ಮರಗಳ, ಮುಖ್ಯವಾಗಿ ಕಬ್ಬಿನ) ಹೊಡೆ; ಸೂಲಂಗಿ.
See also 1arrow
2arrow ಆರೋ
ಅಕರ್ಮಕ ಕ್ರಿಯಾಪದ
  1. ಶರವೇಗದಿಂದ ಹೋಗು.
  2. (ಕಬ್ಬಿನ ವಿಷಯದಲ್ಲಿ) ಸೂಲಂಗಿ ಬಿಡು; ಹೂ ಬಿಡು; ಹೊಡೆಯೊಡೆ.