arrange ಅರೇಂಜ್‍
ಸಕರ್ಮಕ ಕ್ರಿಯಾಪದ
  1. ಓರಣವಾಗಿರಿಸು; ಒಪ್ಪವಾಗಿರಿಸು; ಕ್ರಮದಲ್ಲಿಡು; ಅಚ್ಚುಕಟ್ಟಾಗಿ ಜೋಡಿಸಿಡು: he arranged the books on the shelf ಅವನು ಕಪಾಟಿನ ಮೇಲೆ ಪುಸ್ತಕಗಳನ್ನು ಜೋಡಿಸಿದನು.
  2. ಅಣಿ ಮಾಡು; ಏರ್ಪಡಿಸು; ಸಿದ್ಧಪಡಿಸು; ವ್ಯವಸ್ಥೆ ಮಾಡು: arrange a dinner in his honour ಅವನ ಗೌರವಾರ್ಥ ಒಂದು ಭೋಜನವೇರ್ಪಡಿಸು.
  3. (ವ್ಯಾಜ್ಯ, ಕೌಲು, ಮೊದಲಾದವನ್ನು) ಬಗೆಹರಿಸು; ಒಪ್ಪಂದ ಮಾಡಿಕೊ; ತೀರ್ಮಾನಿಸು; ಏರ್ಪಡಿಸು: to arrange a truce ಕದನವಿರಾಮವನ್ನು ಏರ್ಪಡಿಸು.
  4. (ನಾಟಕ ಮೊದಲಾದವನ್ನು) ಪ್ರಸಾರಕ್ಕೆ ಅಳವಡಿಸು; ಹೊಂದಿಸು: arrange the play for broadcasting ನಾಟಕವನ್ನು ರೇಡಿಯೊ ಪ್ರಸಾರಕ್ಕೆ ಅಳವಡಿಸು.
  5. (ಸಂಗೀತ) (ಗೀತವನ್ನು, ಕೃತಿಯನ್ನು) (ಮೂಲತಃ ಉದ್ೇಶಿಸಿಲ್ಲದ ವಾದ್ಯಕ್ಕಾಗಲಿ, ಹಾಡುಗಾರಿಕೆಗಾಗಲಿ) ಅಳವಡಿಸು; ಹೊಂದಿಸು.
  6. (ಮಾಡಬೇಕಾದುದರ ಕ್ರಮ, ರೀತಿ, ಮೊದಲಾದವನ್ನು) ಮೊದಲೇ – ವ್ಯವಸ್ಥೆ ಮಾಡು, ನಿರ್ಧರಿಸು, ನಿರ್ಣಯಿಸು, ನಿಯೋಜಿಸು.
  7. ಯೋಜಿಸು; ಆಗುವಂತೆ ಮಾಡು; ಆಗಗೊಳಿಸು.
ಅಕರ್ಮಕ ಕ್ರಿಯಾಪದ
  1. (ಮತ್ತೊಬ್ಬರೊಡನೆ ಯಾ ಯಾವುದೇ ವಿಷಯದ ಬಗ್ಗೆ) ಗೊತ್ತು ಮಾಡಿಕೊ; ಒಪ್ಪಂದಕ್ಕೆ ಬರು: he has arranged with the musician for a free performance ಅವನು ಸಂಗೀತಗಾರನೊಂದಿಗೆ ಒಂದು ಉಚಿತ ಕಚೇರಿಗಾಗಿ ಗೊತ್ತುಮಾಡಿಕೊಂಡಿದ್ದಾನೆ.
  2. ಕ್ರಮ ಕೈಗೊಳ್ಳು; ಕ್ರಮ ತೆಗೆದುಕೊ: arrange to be there ಅಲ್ಲಿರುವಂತೆ ಕ್ರಮ ತೆಗೆದುಕೊ.
  3. ವ್ಯವಸ್ಥೆ ಮಾಡು; ಸಿದ್ಧತೆ ಮಾಡು; ಏರ್ಪಾಟು ಮಾಡು.
  4. ಸೂಚನೆ ಕೊಡು; ನಿರ್ದೇಶನ ನೀಡು: arrange about it ಅದರ ಬಗ್ಗೆ ಸೂಚನೆ ನೀಡು.