See also 2around
1around ಅರೌಂಡ್‍
ಕ್ರಿಯಾವಿಶೇಷಣ
  1. ಸಿಂಬಿಯಾಗಿ; ಇರಿಕೆಯಾಗಿ; ಸುತ್ತಾಗಿ; ಸುತ್ತಿ; ವರ್ತುಲವಾಗಿ; ಬಳಸಿ: the serpent coiled around ಹಾವು ಸಿಂಬಿ ಸುತ್ತಿತು.
  2. ಸುತ್ತಲೂ; ಸುತ್ತಮುತ್ತ; ಎಲ್ಲ ದಿಕ್ಕಿಗೂ; ನಾಲ್ಕೂ ಕಡೆಗೂ: the crowd gathered around to see it ಅದನ್ನು ನೋಡಲು ಸುತ್ತಲೂ ಗುಂಪು ಕೂಡಿತು.
  3. ಅಲ್ಲಿ ಇಲ್ಲಿ; ಅನೇಕ ಎಡೆಗಳಲ್ಲಿ; ಮನ ಬಂದೆಡೆಯಲ್ಲಿ; ಗೊತ್ತುಗುರಿಯಿಲ್ಲದೆ: he travelled around for a time ಅವನು ಕೆಲಕಾಲ ಅಲ್ಲಿ ಇಲ್ಲಿ ಪ್ರಯಾಣಮಾಡಿದನು.
  4. (ಆಡುಮಾತು) ಅಲ್ಲೇ; ಹತ್ತಿರದಲ್ಲೇ; ಸಮೀಪದಲ್ಲೇ; ಸನಿಯದಲ್ಲೇ: he has to stay around and wait ಅವನು ಅಲ್ಲೇ ಇದ್ದು ಕಾಯಬೇಕು.
  5. (ಆಡುಮಾತು) ಒಂದು ಗೊತ್ತಾದ ಸ್ಥಳಕ್ಕೆ: come around to see us ನಮ್ಮನ್ನು ನೋಡಲು ನಮ್ಮಲ್ಲಿಗೆ ಬನ್ನಿ.
  6. ಮೊದಲಿಂದ ಕೊನೆಯವರೆಗೂ; ಇಡೀ; ಆದ್ಯಂತ; ಪೂರ್ತಿ: a cool climate the year around ವರ್ಷವಿಡೀ ತಂಪಾದ ಹವೆ.
  7. ಹಿಂದಕ್ಕೆ; ವಿರುದ್ಧ ದಿಕ್ಕಿನಲ್ಲಿ; ಹಿಂದುಗಡೆಗೆ: he turned around and spoke to me ಅವನು ಹಿಂತಿರುಗಿ ನನ್ನನ್ನು ಮಾತಾಡಿಸಿದ.
ನುಡಿಗಟ್ಟು
  1. fool around ಅಲ್ಲಿ ಇಲ್ಲಿ ಅಲೆದಾಡು.
  2. have been around (ಆಡುಮಾತು) ವ್ಯವಹಾರ ಜ್ಞಾನ ಸಂಪಾದಿಸಿರು; ಲೋಕಜ್ಞಾನ ಪಡೆದಿರು.
See also 1around
2around ಅರೌಂಡ್‍
ಉಪಸರ್ಗ
  1. ಸುತ್ತ; ಸುತ್ತಲೂ: ಸುತ್ತಮುತ್ತ: he went around the building twice ಅವನು ಕಟ್ಟಡದ ಸುತ್ತ ಎರಡು ಬಾರಿ ಹೋಗಿ ಬಂದ. around his neck ಅವನ ಕತ್ತಿನ ಸುತ್ತಲೂ. he stood looking around him ಅವನು ತನ್ನ ಸುತ್ತಮುತ್ತ ನೋಡುತ್ತ ನಿಂತ.
  2. ಹತ್ತಿರ; ಬಳಿ; ಸಮೀಪದಲ್ಲಿ; ಸುತ್ತಮುತ್ತ: the men around the President are misleading him ಅಧ್ಯಕ್ಷರ ಸುತ್ತಮುತ್ತಲಿನ ಜನ ಅವರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ.
  3. ಅಲ್ಲಲ್ಲಿ; ಎಲ್ಲ ಕಡೆಯೂ: he travelled around the country several times ಅವನು ದೇಶದಲ್ಲೆಲ್ಲಾ ಅನೇಕ ಬಾರಿ ಪ್ರಯಾಣ ಮಾಡಿದನು.
  4. ಇರುವ; ಜೀವಿಸಿರುವ; ದೊರಕುವ; ಸಿಕ್ಕುವ: when the master was around ಯಜಮಾನ ಇದ್ದಾಗ. when dinosaurs were around ಡೈನೊಸಾರ್‍ಗಳು ಜೀವಿಸಿದ್ದಾಗ.
  5. (ಅಮೆರಿಕನ್‍ ಪ್ರಯೋಗ) ತಿರುವಿನಲ್ಲಿ; ತಿರುಗಿನಲ್ಲಿ; ತಿರುಗುವಾಗ: the church around the corner ಮೂಲೆಯ ತಿರುವಿನಲ್ಲಿರುವ ಚರ್ಚು.
  6. (ಅಮೆರಿಕನ್‍ ಪ್ರಯೋಗ) (ಕಾಲ, ಪ್ರಮಾಣ, ಮೊದಲಾದವುಗಳಲ್ಲಿ) ಸರಿಸುಮಾರಾಗಿರುವ; ಹೆಚ್ಚುಕಡಮೆ ಸಮನಾಗಿರುವ.