aristocracy ಆರಿಸ್ಟಾಕ್ರಸಿ
ನಾಮವಾಚಕ
  1. ಶ್ರೀಮಂತ ಪ್ರಭುತ್ವ; ಕುಲೀನಸತ್ತೆ; ಮನೆತನ, ಬುದ್ಧಿಶಕ್ತಿ, ಮೊದಲಾದವುಗಳಲ್ಲಿ ಉತ್ತಮರೆನಿಸಿಕೊಂಡವರ ಆಳ್ವಿಕೆ, ಸರ್ಕಾರ.
  2. ಶ್ರೀಮಂತ ಪ್ರಭುತ್ವವುಳ್ಳ ರಾಷ್ಟ್ರ.
  3. ಕುಲೀನ ವರ್ಗ; ಶ್ರೀಮಂತ ವರ್ಗ; ಅಭಿಜಾತ ವರ್ಗ.
  4. ಆಳುವ, ಪ್ರಜಾಪ್ರಭುತ್ವ ಮಾಡುವ ಶ್ರೀಮಂತ ವರ್ಗ.
  5. ಉತ್ತಮರು; ಶ್ರೇಷ್ಠರು; ಸುಸಂಸ್ಕೃತರು; ಬುದ್ಧಿ, ಸಂಸ್ಕೃತಿ, ಮೊದಲಾದವುಗಳ ಉತ್ತಮ ಪ್ರತಿನಿಧಿಗಳು: an aristocracy of talent ಕೌಶಲದಲ್ಲಿ ಶ್ರೇಷ್ಠರು.