argue ಆರ್ಗ್ಯೂ
ಸಕರ್ಮಕ ಕ್ರಿಯಾಪದ
  1. (ಸಕಾರಣವಾಗಿ) ತೋರಿಸು; ವ್ಯಕ್ತಪಡಿಸು; ಸೂಚಿಸು: his behaviour argues him a rogue ಅವನು ಠಕ್ಕನೆಂಬುದನ್ನು ಅವನ ನಡತೆಯೇ ತೋರಿಸುತ್ತದೆ.
  2. ಚರ್ಚಿಸು; ವಾದಿಸು: they can argue any question openly ಯಾವ ಪ್ರಶ್ನೆಯನ್ನು ಬೇಕಾದರೂ ಅವರು ಬಹಿರಂಗವಾಗಿ ಚರ್ಚಿಸಬಹುದು.
  3. ಸಮರ್ಥಿಸು; ಸಾಧಿಸು: he argued that our foreign policy is not correct ನಮ್ಮ ವಿದೇಶಾಂಗ ನೀತಿ ಸರಿಯಲ್ಲವೆಂದು ಅವನು ಸಾಧಿಸಿದನು.
  4. ತಾರ್ಕಿಕವಾಗಿ ಪರೀಕ್ಷಿಸು; ಯುಕ್ತಿಯುಕ್ತವಾಗಿ ಪರಿಶೀಲಿಸು; ಸಾಧಕಬಾಧಕಗಳನ್ನು ಚರ್ಚಿಸು; ಒಂದರ ಪರ ಯಾ ವಿರೋಧ ಅಂಶಗಳನ್ನು ಮುಂದಿಡು.
  5. (ಒಬ್ಬನನ್ನು) ಒಲಿಸು; ಒಪ್ಪಿಸು; ಒಡಂಬಡಿಸು; ಅಂಗೀಕರಿಸುವಂತೆ, ಒಪ್ಪುವಂತೆ, ಸಮ್ಮತಿಸುವಂತೆ-ಮಾಡು: argue him into doing this ಇದನ್ನು ಮಾಡಲು ಅವನನ್ನು ಒಲಿಸು. argue him out of doing that ಅದನ್ನು ಮಾಡದಿರಲು ಅವನನ್ನು ಒಪ್ಪಿಸು.
ಅಕರ್ಮಕ ಕ್ರಿಯಾಪದ

ಮಾತೊಡ್ಡು; ವಾದಿಸು; ವಾದ ಮಾಡು: he will not take it amiss if you argue with him ಅವನೊಂದಿಗೆ ವಾದ ಮಾಡಿದರೆ ಅವನು ತಪ್ಪು ತಿಳಿದುಕೊಳ್ಳುವುದಿಲ್ಲ.

ನುಡಿಗಟ್ಟು
  1. argue it away (ಯಾವುದನ್ನೇ) ವಾದದ ಮೂಲಕ – ತೇಲಿಸಿಬಿಡು, ಹಾರಿಸಿಬಿಡು, ಪರಿಹರಿಸಿಬಿಡು.
  2. argue the $^2$toss.