appurtenance ಅಪರ್ಟಿನನ್ಸ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನ)

  1. (ನ್ಯಾಯಶಾಸ್ತ್ರ) ಜತೆ ಸವಲತ್ತು; ಉಪಸವಲತ್ತು; ಮರಿಹಕ್ಕು; ಉಪಹಕ್ಕು; ಉಪಬಾಧ್ಯತೆ; ಒಂದು ಆಸ್ತಿಯ ಒಡೆತನ ಮೊದಲಾದ ಯಾವುದೇ ಹಕ್ಕಿನಿಂದಾಗಿ ಬರುವ ಇತರ ಸವಲತ್ತುಗಳು.
  2. (ಮುಖ್ಯವಾಗಿ ಬಹುವಚನದಲ್ಲಿ) ಸಾಧನ ಸಾಮಗ್ರಿ; ಸಲಕರಣೆ; ಉಪಕರಣ; ಮುಟ್ಟು.
  3. ಅನುಬಂಧ; ಉಪಾಂಗ; ಮುಖ್ಯವಾದ ಭಾಗಕ್ಕೆ ಸಹಾಯಕವಾದ ಯಾ ಅಧೀನವಾದ ಭಾಗ, ಅಂಗ.