appreciate ಅಪ್ರೀಷಿ(ಸಿ)ಏಟ್‍
ಸಕರ್ಮಕ ಕ್ರಿಯಾಪದ
  1. ಬೆಲೆ ಕಟ್ಟು; (ಗುಣ, ಯೋಗ್ಯತೆ, ಪ್ರಮಾಣಗಳನ್ನು) ಗೊತ್ತು ಮಾಡು, ನಿರ್ಧರಿಸು: he is unable to appreciate its quality ಆತ ಅದರ ಗುಣಗಳನ್ನು ನಿರ್ಧರಿಸಲಾರ.
  2. ಸರಿಯಾಗಿ ಬೆಲೆಕಟ್ಟು; ಒಂದರ ಗುಣ, ಯೋಗ್ಯತೆ, ಪ್ರಭಾವ, ಮೊದಲಾದವನ್ನು ಅರಿ, ಗುರುತಿಸು, ಗ್ರಹಿಸು: instantly appreciating the magnitude of the danger ಅಪಾಯದ ಬೃಹತ್ಪ್ರಮಾಣವನ್ನು ತಕ್ಷಣ ಅರಿತು.
  3. ಗುಣ ಗ್ರಹಿಸು; ಬೆಲೆ ಕಂಡುಕೊ.
  4. ಅರ್ಥ ಮಾಡಿಕೊಂಡು ಆಸ್ವಾದಿಸು; ಸ್ವಾರಸ್ಯ ಗ್ರಹಿಸು.
  5. (ಯಾವುದಕ್ಕೇ) ಸೂಕ್ಷ ಸಂವೇದನೆ ಹೊಂದಿರು; ಸೂಕ್ಷ್ಮಗ್ರಾಹಿಯಾಗಿರು: a blind man is able to appreciate sound, touch etc. but not colours ಕುರುಡನು ಶಬ್ದ, ಸ್ಪರ್ಶ, ಮೊದಲಾದವುಗಳಿಗೆ ಸೂಕ್ಷ್ಮಗ್ರಾಹಿಯಾಗಿರಬಲ್ಲನೇ ಹೊರತು ಬಣ್ಣಗಳಿಗಲ್ಲ.
  6. ಬೆಲೆ ಕೊಡು; ಮಹತ್ವ ಕೊಡು; ಗೌರವದಿಂದ ಕಾಣು; ಮೆಚ್ಚು: I appreciate your generosity ನಾನು ನಿನ್ನ ಔದಾರ್ಯ ಮೆಚ್ಚುತ್ತೇನೆ.
  7. ಕೃತಜ್ಞನಾಗಿದ್ದೇನೆ.
  8. ಬೆಲೆ – ಏರಿಸು, ಹೆಚ್ಚಿಸು: last year rice was considerably appreciated ಹೋದ ವರ್ಷ ಅಕ್ಕಿಯ ಬೆಲೆಯನ್ನು ಸಾಕಷ್ಟು ಹೆಚ್ಚಿಸಿದರು.
ಅಕರ್ಮಕ ಕ್ರಿಯಾಪದ

ಬೆಲೆ ಏರು; ತೇಜಿಯಾಗು; ತುಟ್ಟಿಯಾಗು; ಪ್ರಿಯವಾಗು: milk has appreciated 20 to 30 percent ಹಾಲಿನ ಬೆಲೆ ಶೇಕಡ 20 ರಿಂದ 30 ರಷ್ಟು ಏರಿದೆ.