apply ಅಪ್ಲೈ
ಸಕರ್ಮಕ ಕ್ರಿಯಾಪದ

(ಭೂತರೂಪ applied)

  1. ತಗುಲಿಸು; ಸಂಪರ್ಕ ಕಲ್ಪಿಸು ಯಾ ಹತಿರಕ್ಕೆ ತರು: to apply a match to gunpowder ತುಪಾಕಿ ಮದ್ದಿಗೆ ಬೆಂಕಿಕಡ್ಡಿ ತಗುಲಿಸು.
  2. ಬಳಸು; ಉಪಯೋಗಿಸು: he applied his knowledge of physics ಅವನು ತನ್ನ ಭೌತಶಾಸ್ತ್ರದ ಜ್ಞಾನವನ್ನು ಬಳಸಿದನು.
  3. ಅನ್ವಯಿಸು; ಪ್ರಯೋಗಿಸು: that rule cannot be applied here ಆ ನಿಯಮವನ್ನು ಇಲ್ಲಿ ಅನ್ವಯಿಸಲಾಗದು.
  4. ಮೇಲಿಡು; ಹಾಕು; ಸವರು; ಹಚ್ಚು; ಬಳಿ; ಲೇಪಿಸು: you can now apply the ointment ಈಗ ನೀನು ಆ ಮುಲಾಮನ್ನು ಹಚ್ಚಬಹುದು.
  5. (ಆತ್ಮಾರ್ಥಕ) ಗಮನಿಸು; ಶ್ರದ್ಧೆಯಿಡು; ನಿರತನಾಗು; ಮನಸ್ಸಿಡು: he applied himself to the task ಅವನು ಆ ಕೆಲಸದಲ್ಲಿ ನಿರತನಾದ.
ಅಕರ್ಮಕ ಕ್ರಿಯಾಪದ
  1. ಅನ್ವಯವಾಗು; ಸಂಬಂಧಿಸಿರು: the argument applies to this case also ಆ ವಾದವು ಇದಕ್ಕೂ ಅನ್ವಯಿಸುತ್ತದೆ.
  2. (ಸಹಾಯ ಮೊದಲಾದವುಗಳಿಗೆ) ಬರೆದುಕೊ; ಅರ್ಜಿ ಹಾಕಿಕೊ: apply to a bank for a loan ಬ್ಯಾಂಕಿಗೆ ಸಾಲಕ್ಕೆ ಬರೆದುಕೊ.
  3. (ಕೆಲಸ ಮೊದಲಾದವುಗಳಿಗೆ) ಬೇಡು; ಮನವಿ ಮಾಡಿಕೊ; ಅರ್ಜಿ ಹಾಕಿಕೊ: he applied for the job ಅವನು ಕೆಲಸಕ್ಕೆ ಅರ್ಜಿ ಹಾಕಿಕೊಂಡ.