See also 2any  3any
1any ಎನಿ
ಗುಣವಾಚಕ
  1. ಕೆಲವು; ಏನಾದರೂ; ಯಾರಾದರೂ; ಒಂದೋ, ಒಂದಕ್ಕಿಂತ ಹೆಚ್ಚಾಗಿಯೋ: have you any witnesses? ನಿನ್ನ ಪರವಾಗಿ ಯಾರಾದರೂ ಸಾಕ್ಷಿಗಳಿದ್ದಾರೆಯೇ?
  2. ಕೊಂಚ; ಸ್ವಲ್ಪ; ಅಷ್ಟಿಷ್ಟಾದರೂ; ಕಿಂಚಿತ್ತೂ: he did not have any money ಅವನ ಬಳಿ ಕೊಂಚವೂ ದುಡ್ಡಿರಲಿಲ್ಲ. is there any rice at home? ಮನೆಯಲ್ಲಿ ಅಷ್ಟಿಷ್ಟಾದರೂ ಅಕ್ಕಿ ಇದೆಯೇ?
  3. ಯಾರಾದರೂ; ಯಾವನಾದರೂ; ಏನಾದರೂ; ಯಾವ ತರಹದ್ದಾದರೂ; ಯಾವುದನ್ನು ತೆಗೆದುಕೊಂಡರೂ: get me some oil, any kind will do ಸ್ವಲ್ಪ ಎಣ್ಣೆ ತಾ, ಯಾವ ತರಹದ್ದಾದರೂ ಸರಿ.
  4. ಪ್ರತಿಯೊಬ್ಬನೂ; ಪ್ರತಿಯೊಂದೂ; ಎಲ್ಲರೂ; ಎಲ್ಲವೂ; ಯಾವುದೇ; ಯಾವನೇ: any school boy knows the fable of the cow and the tiger ಹಸು ಮತ್ತು ಹುಲಿಯ ಕಥೆ ಪ್ರತಿಯೊಬ್ಬ ಶಾಲಾ ಬಾಲಕನಿಗೂ ಗೊತ್ತು.
ನುಡಿಗಟ್ಟು
  1. at any rate ಏನೇ ಆಗಲಿ; ಏನೇ ಆದರೂ; ಅಂತೂ; ಯಾವುದೇ ಸಂದರ್ಭದಲ್ಲಾದರೂ.
  2. any amount ಬಹಳ; ತುಂಬ.
  3. any time (ಆಡುಮಾತು) ಯಾವ ಹೊತ್ತಿನಲ್ಲಾದರೂ; ಯಾವಾಗ ಬೇಕಾದರೂ.
  4. in any case = ನುಡಿಗಟ್ಟು \((1)\).
See also 1any  3any
2any ಎನಿ
ಸರ್ವನಾಮ
  1. ಒಬ್ಬನೊ, ಹೆಚ್ಚು ಜನರೊ; ಯಾರಾದರೂ: the delegates were in the hall; did any speak? ಪ್ರತಿನಿಧಿಗಳು ಸಭಾಂಗಣದಲ್ಲಿದ್ದರು; ಅವರಲ್ಲಿ ಯಾರಾದರೂ ಭಾಷಣ ಮಾಡಿದರೆ?
  2. ಒಂದೊ, ಒಂದಕ್ಕೂ ಹೆಚ್ಚೊ; ಕೆಲವಾದರೂ: a week ago, I saw new shoes in your shop; are ther any left? ಒಂದು ವಾರದ ಹಿಂದೆ ನಿನ್ನ ಅಂಗಡಿಯಲ್ಲಿ ಹೊಸ ಪಾದರಕ್ಷೆಗಳನ್ನು ಕಂಡೆ, ಕೆಲವಾದರೂ ಉಳಿದಿವೆಯೆ?
  3. (ಸಂಖ್ಯೆ, ಕಾಲ, ಪ್ರಮಾಣದಲ್ಲಿ) ಬೇಕಾದಷ್ಟು; ಸಾಕಷ್ಟು.
ನುಡಿಗಟ್ಟು

not having any (ಆಡುಮಾತು) ಭಾಗವಹಿಸಲು ಯಾ ಸಹಕರಿಸಲು ಯಾರೂ ಇಷ್ಟಪಡದ: they wanted me to be in it, but I wasn’t having any ನಾನು ಅದರಲ್ಲಿ ಸೇರಬೇಕೆಂದು ಅವರ ಅಪೇಕ್ಷೆಯಾಗಿತ್ತು, ಆದರೆ ಭಾಗವಹಿಸಲು ನನಗೆ ಇಷ್ಟವಿರಲಿಲ್ಲ.

See also 1any  2any
3any ಎನಿ
ಕ್ರಿಯಾವಿಶೇಷಣ

ಅಷ್ಟಿಷ್ಟಾದರೂ; ಕೊಂಚಮಟ್ಟಿಗೆ: are you any better? ನಿನ್ನ ಆರೋಗ್ಯ ಕೊಂಚಮಟ್ಟಿಗಾದರೂ ಉತ್ತಮವಾಗಿದೆಯೇ?