anticlimax ಆನ್ಟಿಕ್ಲೈಮ್ಯಾಕ್ಸ್‍
ನಾಮವಾಚಕ
  1. ಪ್ರತ್ಯುಚ್ಚ; ಪ್ರತಿಕಾಷ್ಠೆ; ನಿರೀಕ್ಷಿಸಿದಂತೆ ಮೇಲೇರುವುದಕ್ಕೆ ವಿರುದ್ಧವಾಗಿ ಹಟಾತ್ತಾಗಿ ಕೆಳಕ್ಕಿಳಿಯುವುದು (ಉದಾಹರಣೆಗೆthe queen sometimes took counsel there and sometimes tea ರಾಣಿಯು ಅಲ್ಲಿ ಕೆಲವು ವೇಳೆ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದಳು, ಕೆಲವು ವೇಳೆ ಚಹಾ).
  2. ಆಭಾಸ; ಘನಗಾಂಭೀರ್ಯದಿಂದ ಅತಿ ಲಾಘವಕ್ಕೆ ಹಾಸ್ಯಾಸ್ಪದವಾಗಿ ಇಳಿಯುವಿಕೆ (ಉದಾಹರಣೆಗೆ he had faith in God, courage and twenty rupees cash ಅವನಲ್ಲಿ ದೈವ ಭಕ್ತಿ, ಧೈರ್ಯ ಹಾಗೂ ಇಪ್ಪತ್ತು ರೂಪಾಯಿಗಳು ಇದ್ದವು).