anthem ಆನ್ತೆ(ನ್ತ)ಮ್‍
ನಾಮವಾಚಕ
  1. (ಚರ್ಚಿನಲ್ಲಿನ) ಸಂವಾದಗೀತೆ; ಉತ್ತರ ಪ್ರತ್ಯುತ್ತರದಂತೆ ಹಾಡುವ ಗೀತೆ.
  2. ವಚನಗಾನ; ಪವಿತ್ರಗ್ರಂಥಗಳಿಂದ ಆಯ್ದು, ಗಾಯನಕ್ಕೆ ಹೊಂದಿಸಿದ, ಛಂದೋಬದ್ಧವಲ್ಲದ ಗೀತೆ.
  3. ಸ್ಟೋತ್ರ; ಸ್ತುತಿಗೀತೆ; ಭಕ್ತಿಗೀತೆ; ಸಂಕೀರ್ತನೆ.
  4. ಉಲ್ಲಾಸಗಾನ; ಹರ್ಷಗೀತೆ.
  5. ರಾಷ್ಟ್ರಗೀತೆ.