See also 2another
1another ಅನದರ್‍
ಗುಣವಾಚಕ
(ಬಹುವಚನ other).
  1. ಮತ್ತೊಂದು; ಇನ್ನೂ ಒಂದು.
  2. (ಬ್ರಿಟಿಷ್‍ ಪ್ರಯೋಗ, ನ್ಯಾಯಶಾಸ್ತ್ರ) (ವ್ಯಾಜ್ಯದಲ್ಲಿ ಹೆಸರಿಸದ) ಮತ್ತೊಬ್ಬ: government versus x, y and another ಸರ್ಕಾರಕ್ಕೂ x, y ಮತ್ತು ಮತ್ತೊಬ್ಬ – ಇವರಿಗೂ ನಡುವೆ.
  3. (ಬ್ರಿಟಿಷ್‍ ಪ್ರಯೋಗ) (ಆಟಗಾರರ ಪಟ್ಟಿಯಲ್ಲಿ ನಾಮಕರಣಗೊಳ್ಳದ ಯಾ ಇನ್ನೂ ಆಯ್ಕೆಯಾಗದ) ಇನ್ನೊಬ್ಬ ಆಟಗಾರ (A.N.Other ಎಂದೂ ಪ್ರಯೋಗ)
  4. ಅಂತಹ; ಸದೃಶವಾದ; ಅವನಂತಿರುವ; ಅವನನ್ನು ಹೋಲುವ; ಇನ್ನೊಂದು; ಇನ್ನೊಬ್ಬ: he is another Ashoka ಅವನು ಇನ್ನೊಬ್ಬ ಅಶೋಕ; ಅಶೋಕನಂತಹ ಮಹಾಸಾಮ್ರಾಟ.
  5. ಬೇರೊಂದು; ಬೇರೊಬ್ಬ; ಬೇರೆ; ಅನ್ಯ: take this cake of soap away and bring me another ಈ ಸಾಬೂನನ್ನು ತೆಗೆದುಕೊಂಡು ಹೋಗಿ ಬೇರೊಂದನ್ನು ತಾ. one man’s meat is another man’s poison ಒಬ್ಬನಿಗೆ ಅನ್ನ ಬೇರೊಬ್ಬನಿಗೆ ವಿಷ. he is now another man ಅವನೀಗ ಬೇರೆ ಮನುಷ್ಯ.
ಪದಗುಚ್ಛ
  1. another place (ಬ್ರಿಟಿಷ್‍ ಪ್ರಯೋಗ) (ಕಾಮನ್ಸ್‍ ಸಭೆಯು ಲಾಡ್ಸ್‍ ಸಭೆಯನ್ನೂ, ಲಾಡ್ಸ್‍ ಸಭೆಯು ಕಾಮನ್ಸ್‍ ಸಭೆಯನ್ನೂ, ಉಲ್ಲೇಖಿಸುವಾಗ ಹೇಳುವ ಮಾತು) ಇನ್ನೊಂದು ಸಭೆ.
  2. such another ಅದೇ ಬಗೆಯ, ಅಂಥದೇ – ಇನ್ನೊಂದು, ಇನ್ನೊಬ್ಬ(ಳು).
ನುಡಿಗಟ್ಟು
  1. one another (ಇಬ್ಬರಿಗೆ ಮೇಲ್ಪಟ್ಟ ಸಂಖ್ಯೆಯಾದರೆ) ಪರಸ್ಪರ; ಒಬ್ಬರನ್ನೊಬ್ಬರು; ಒಂದನ್ನೊಂದು.
  2. one with another
    1. ಒಟ್ಟಾರೆ; ಎಲ್ಲ-ಒಟ್ಟಾಗಿ, ಕೂಡಿ, ಸೇರಿ.
    2. ಸರಿಸುಮಾರಾಗಿ; ಹೆಚ್ಚುಕಡಮೆ; ಸರಾಸರಿಯಾಗಿ.
See also 1another
2another ಅನದರ್‍
ಸರ್ವನಾಮ
(ಬಹುವಚನ others).
  1. (ಒಂದೇ ತೆರದ ಇಬ್ಬರ ವಿಷಯದಲ್ಲಿ) ಇನ್ನೊಬ್ಬ; ಮತ್ತೊಬ್ಬ: one carried a gun, another a hatchet ಒಬ್ಬ ಕೋವಿ ಹಿಡಿದಿದ್ದ, ಇನ್ನೊಬ್ಬ ಮಚ್ಚು ಹಿಡಿದಿದ್ದ.
  2. ಬೇರೆ; ಬೇರೊಬ್ಬ; ಬೇರೊಂದು; ಅನ್ಯ: peace is onething, but peace with dishonour is another ಶಾಂತಿ ಸರಿಯೆ, ಅವಮಾನ ತರುವ ಶಾಂತಿಯಾದರೋ ಬೇರೆ ವಿಷಯ.
  3. ಇನ್ನೂ – ಒಂದು, ಒಬ್ಬ; ಹೆಚ್ಚಿನವ ಯಾ ಹೆಚ್ಚಿನದು.
  4. ಸದೃಶ; ಅದೇ ತೆರನವ ಯಾ ತೆರನದು.